ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಿ ಗೌರವಿಸಿದ ಮೈಸೂರು ನಗರದ ಭಾರತೀಯ ಜನತಾ ಪಾರ್ಟಿ
1 min read
ಮೈಸೂರು: 1975 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕರ್ನಾಟಕದ ಮೈಸೂರಿನಲ್ಲಿ ಬಂಧನಕ್ಕೊಳಗಾಗಿ ತಿಂಗಳುಗಳ ಕಾಲ ಸೆರೆವಾಸ ಅನುಭವಿಸಿದಂತಹ ಹಿರಿಯ ಕಾರ್ಯಕರ್ತರರಾದ ಮಾಜಿ ವಿಧಾನ ಪರಿಷತ್ ಸದಸ್ಯರು ತೋಂಟದಾರ್ಯ, ಮಾಜಿ ನಗರ ಪಾಲಿಕೆ ಸದಸ್ಯರಾದ ಎನ್ .ಆರ್ ಚಂದ್ರಶೇಖರ, ಗುರು ಹೋಟೇಲ್ ಮಾಲೀಕರು ಮಹದೇವಣ್ಣ ರವರನ್ನು ಮೈಸೂರು ನಗರದ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ವತ್ಸ, ಚಾಮರಾಜ ಕ್ಷೇತ್ರದ ಶಾಸಕರಾದ ನಾಗೇಂದ್ರ , ಮಾಧ್ಯಮ ಪ್ರಮುಖ್ ಮೋಹನ್ , ಮೈಸೂರು ನಗರ ಜಿಲ್ಲಾ ಉಪಾಧ್ಯಕ್ಷರಾದ ಟಿ.ರಮೇಶ್ , ಮೈಸೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ , ಮೈಸೂರು ನಗರ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ, ಮೈಸೂರು ನಗರ ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್,ನಗರ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಜಯರಾಂ , ಉಪಾಧ್ಯಕ್ಷರಾದ ಸೋಮಶೇಖರ್,ಒ.ಬಿ.ಸಿ ನಗರ ಉಪಾಧ್ಯಕ್ಷರಾದ ಶಿವರಾಜ್ ,ರವಿ ಉಪಸ್ಥಿತರಿದ್ದರು
