ಮೈಸೂರಿನಲ್ಲಿ ಮುಂದುವರೆದ ಕೊರೋನಾ ಸೋಂಕಿತರ ಮರಣ ಮೃದಂಗ
1 min readಮೈಸೂರು: ಮೈಸೂರಿನಲ್ಲಿ ಕರೋನಾ ಸೋಂಕಿತರು ಮರಣ ಮೃದಂಗ ಮುಂದುವರೆದಿದ್ದು, ಇಂದು 10 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಕಳೆದ 25 ದಿನದಲ್ಲಿ 184 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿಯ ವರೆಗು ಮೈಸೂರಿನಲ್ಲಿ ಒಟ್ಟು 1254 ಮಂದಿ ಕರೋನಾಗೆ ಮೃತಪಟ್ಟಿದ್ದಾರೆ.
ಇನ್ನು ಇಂದು ಬರೋಬ್ಬರಿ 2790 ಹೊಸ ಪಾಸಿಟಿವ್ ಕೇಸ್ ದಾಖಲಾಗಿದೆ. ಇನ್ನು ಇಂದು 2075 ಮಂದಿ ಗುಣಮುಖರಾಗಿದ್ದು, ಒಟ್ಟು ಈ ವರೆಗು 71977 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಒಟ್ಟು 89,0812 ಮಂದಿಗೆ ಸೋಂಕು ತಗುಲಿದ್ದು, ಇದೀಗಾ ಸಕ್ರಿಯ ಪ್ರಕರಣಗಳ ಸಂಖ್ಯೆ 18666ಕ್ಕೆ ಏರಿದೆ.