ಒಂದು ಕಡೆ ಬೆಡ್ ಸಮಸ್ಯೆ ಮತ್ತೊಂದು ಕಡೆ ಆಂಬ್ಯುಲೆನ್ಸ್ ಸಮಸ್ಯೆ
1 min readಮೈಸೂರು: ಮೈಸೂರಿನ KR ಆಸ್ಪತ್ರೆಯಲ್ಲಿ ಒಂದು ಕಡೆ ಬೆಡ್ ಸಮಸ್ಯೆ ಮತ್ತೊಂದು ಕಡೆ ಆಂಬ್ಯುಲೆನ್ಸ್ ಸಮಸ್ಯೆ. ಒಂದು ಕಡೆ ರೋಗಿಗಳು ಬೆಡ್ ಇಲ್ಲದೆ ಪರದಾಡುತ್ತಿದ್ದರೆ ಮತ್ತೊಂದು ಕಡೆ ಸತ್ತವರ ಮೃತ ದೇಹಕ್ಕಾಗಿ ಸಂಬಂಧಿಕರು ಕಾದು ಕಾದು ಸಾಕಾಗಿ ಆಕ್ರೋಶಗೊಂಡಿದ್ದಾರೆ.
ಮೈಸೂರಿನಲ್ಲಿ ದಿನೇ ದಿನೇ ಬೆಡ್ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆ.ಆರ್.ಆಸ್ಪತ್ರೆ ಮುಂದೆ ಬೆಡ್ ಗಾಗಿ ರೋಗಿಗಳ ಪರದಾಟ ನಡೆಸುತ್ತಿದ್ದಾರೆ. 10 ಅಂಬುಲೆನ್ಸ್ ಗಳಲ್ಲಿ ರೋಗಿಗಳು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಹಾಗೂ ಅಕ್ಸಿಜನ್ ಬೆಡ್ ಗಾಗಿ ಕಾಯುತ್ತಿದ್ದಾರೆ.
ಸೋಂಕಿತರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳ ಹಿನ್ನಲೆ ಮೈಸೂರಿನಲ್ಲಿ ಬೆಡ್ ಸಮಸ್ಯೆ ಹೆಚ್ಚಾಗಿದೆ. ಇನ್ನು ವೈದ್ಯರು ಏನೂ ಮಾಡಲಾಗದೆ ಅಸಹಾಯಕಥೆ ತೋರುತ್ತಿದ್ದಾರೆ. ಇವರು ಬೆಡ್‌ಗಿಂತ್ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನಿಡಲಾಗುತ್ತಿದೆ ಎನ್ನುತ್ತಾರೆ ವೈದ್ಯರು. ಆದರೆ ಬೆಡ್ ಇಲ್ಲದೆ ರೋಗಿಗಳು ಹೊರಗೆ ಪರದಾಡುತ್ತಿದ್ದಾರೆ.
ಸತ್ತವರ ಮೃತ ದೇಹವು ಸಿಗುತ್ತಿಲ್ಲ..!
ಒಂದು ಕಡೆ ಬೆಡ್ ಸಮಸ್ಯೆ ಮತ್ತೊಂದು ಕಡೆ ಆಂಬ್ಯುಲೆನ್ಸ್ ಸಮಸ್ಯೆ. ಸತ್ತವರ ಮೃತ ದೇಹವು ಸಿಗುತ್ತಿಲ್ಲ ಎಂದು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಮೃತರ ಸಂಬಂಧಿಕರು ಆಕ್ರೋಶಗೊಂಡಿದ್ದಾರೆ. ಮೃತಪಟ್ಟು ಒಂದು ದಿನ ಕಳೆದರು ಶವ ಕೊಡ್ತಿಲ್ಲ. ಶವಸಾಗಿಸುವ ವಾಹನ ಇಲ್ಲ ಅಂತ ಮೃತ ದೇಹ ಕೊಟ್ಟಿಲ್ಲ ಅಂತ ನಾಲ್ಕೈದು ಕುಟುಂಬಗಳು ಮೃತದೇಹ ಪಡೆಯಲು ಪರದಾಟ ನಡೆಸುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದೆ ಅಂತ ಕುಟುಂಬಸ್ಥರು ದೂರಿದ್ದಾರೆ. ಅರ್ಧ ಗಂಟೆಯೊಳಗೆ ವಾಹನ ಬರುತ್ತೆ, 10 ನಿಮಿಷದಲ್ಲಿ ಬರುತ್ತೆ ಅಂತಾರೆ ವಾಹನ ಇನ್ನೂ ಬಂದಿಲ್ಲ. ಕೋವಿಡ್ ಪೇಷೇಂಟ್ ಬಳಿ ಹೋಗಬೇಡಿ ಅಂತ ಹೇಳ್ತಾರೆ. ಆದರೆ ಅವರಿಗೆ ಮಾಸ್ಕ್ ಹಾಕುವುದರಿಂದ ಎಲ್ಲಾ ಕೆಲಸವನ್ನ ನಾವೇ ಮಾಡಿದ್ದೇವೆ. ಕೋವಿಡ್ ಇದ್ದರು ಕುಟುಂಬಸ್ಥರೆ ಎಲ್ಲಾ ಕಾರ್ಯವನ್ನು ಮಾಡಿದ್ದೇವೆ. ಕೋವಿಡ್ ಸೋಂಕಿತರರಿರುವ ವಾರ್ಡ್ ನಲ್ಲೆ ಕಾಲ ಕಳೆದಿದ್ದೇವೆ. ಸತ್ತ ಮೇಲು ಮೃತ ದೇಹವನ್ನು ನಾವೇ ಎತ್ತಿಟ್ಟಿದ್ದೇವೆ. ಹಾಗಾದ್ರೆ ಕೊರೊನಾ ನಮಗೆ ಬರಲ್ಲವ ಎಂದು ಕುಟುಂಬಸ್ಥರು ಪ್ರಶ್ನೆ ಮಾಡುತ್ತಿದ್ದಾರೆ.