ಎಚ್ಚರ ವಹಿಸದಿದ್ರೆ’ ಮೈಸೂರಿಗು UP – ಮುಂಬೈ ಮಾದರಿಯ ಪರಿಸ್ಥಿತಿ.!?
1 min readಮೈಸೂರು: ಹಾದಿ, ಬೀದಿಯಲ್ಲಿ ಸಿಲಿಂಡರ್ ಹಾಕಿ ಮಲಗುವ ಸನ್ನಿವೇಶ ಮೈಸೂರಿಗು ಬರುವ ಲಕ್ಷಣ ಗೋಚರಿಸುತ್ತಿದ್ದು ಜನರು ಇದನ್ನು ಹೋಗಲಾಡಿಸಲು ಪಣ ತೋಡಬೇಕಿದೆ. ಹೌದು- ಬೆಡ್‌ಗಳು ಇಲ್ಲ, ಬರುವ ರೋಗಿಗಳನ್ನು ಮಲಗಿಸೋದು ಎಲ್ಲಿ.? ಇದು ಸದ್ಯದ ಮೈಸೂರಿನ ಪರಿಸ್ಥಿತಿ.
ಟ್ರಯಲ್ ರೂಂನಲ್ಲಿ ಸಿಲಿಂಡರ್ ಸಹಾಯದಿಂದ ಉಸಿರಾಡುತ್ತಿರುವ ರೋಗಿಗಳ ದೃಶ್ಯ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಕಂಡು ಬಂದಿದ್ದು ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರದ ಸನ್ನಿವೇಶ ಮೈಸೂರಿನಲ್ಲೂ ಸೃಷ್ಟಿಯಾಗಲಿದೆಯಾ ಎಂಬ ಆತಂಕದ ಪ್ರಶ್ನೆ ಎದುರಾಗಿದೆ.
ಒಬ್ಬ ಕೋವಿಡ್ ರೋಗಿ ಡಿಸ್ಚಾರ್ಜ್ ಆದ್ರೆ ಅದಕ್ಕೆ 20 ಜನ ಸರತಿ ಸಾಲು ನಿಂತಿದ್ದು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕರೊನಾ ಬೆಡ್ ಪರದಾಟ ನಡೆಯುತ್ತಿದೆ. ಕೆ.ಆರ್ ಆಸ್ಪತ್ರೆಯಲ್ಲಿ ಸಮಸ್ಯೆ ಇರುವುದನ್ನ ಖುದ್ದು ವೈದ್ಯಕೀಯ ಅಧೀಕ್ಷಕರಾದ ಡಾ.ನಂಜುಂಡಸ್ವಾಮಿಯವರೇ ವಾಸ್ತವದ ಸತ್ಯ ಒಪ್ಪಿಕೊಂಡಿದ್ದಾರೆ. ನಿತ್ಯ 80ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ 500 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರಿಗೆ ಕನಿಷ್ಠ 6 ದಿನಗಳು ಚಿಕಿತ್ಸೆ ಬೇಕು. ಸದ್ಯ ಯಾರನ್ನೂ ಅಡ್ಮಿಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ 20 ಮಂದಿ ಸರತಿ ಸಾಲಿನಲ್ಲಿ ಇದ್ದಾರೆ. ರೋಗಿಗಳು ಡಿಸ್ಚಾರ್ಜ್ ಆದರೆ ಉಳಿದವರಿಗೆ ಚಿಕಿತ್ಸೆ.
ದಯವಿಟ್ಟು ಚೇತರಿಕೆ ಕಂಡವರು ಬೆಡ್ ಬಿಟ್ಟುಕೊಡಿ. ಇಲ್ಲದೆ ಹೋದ್ರೆ ಆಂಬುಲೆನ್ಸ್ ನಲ್ಲೇ ವೈದ್ಯರು ಹೋಗಿ ಚಿಕಿತ್ಸೆ ಕೊಡಬೇಕಾಗುತ್ತೆ. ಚೇತರಿಕೆಯಾದ ರೋಗಿಗಳು ಬೆಡ್ ಕೊಡಿ ಎಂದು ಕೆ.ಆರ್.ಆಸ್ಪತ್ರೆ ಹಿರಿಯ ಅಧಿಕಾರಿ ಡಾ.ನಂಜುಂಡಸ್ವಾಮಿ ರೋಗಿಗಳಿಗೆ ಮನವಿ ಮಾಡಿದ್ದಾರೆ.