ಇನ್ಮುಂದೆ ಉಚಿತ ಆಹಾರ ನೀಡಬೇಕಿದ್ರೆ ಪಾಲಿಕೆ ಅನುಮತಿ ಕಡ್ಡಾಯ
1 min readಮೈಸೂರು: ಇನ್ಮುಂದೆ ಮೈಸೂರಿನಲ್ಲಿ ಉಚಿತ ಆಹಾರ ನೀಡಬೇಕಿದ್ರೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ಕಡ್ಡಾಯ.
ಹೌದು. ಈ ಬಗ್ಗೆ ಪಾಲಿಕೆಯಿಂದ ಆದೇಶ ಬಂದಿದ್ದು ಉಚಿತ ಆಹಾರ ನೀಡಬೇಕಿದ್ರೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಕೋವಿಡ್ ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆ ಪಾಲಿಕೆ ಕ್ರಮಕ್ಕೆ ಮುಂದಾಗಿದೆ. ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ವಿತರಣೆಗೆ ಅವಕಾಶ ಮಾಡಿಕೊಟ್ಟಿದೆ.
ಇನ್ನು ಬಡವರ ಪಾಲಿಗೆ ನೆರವಾಗಿದ್ದ ಸಂಘ ಸಂಸ್ಥೆಗಳ ಕಾರ್ಯವನ್ನ ಪಾಲಿಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದೆ. ಆದರೆ ಬೇಕೆಂದರಲ್ಲಿ ಇನ್ಮುಂದೆ ಆಹಾರ ವಿತರಣೆ ಮಾಡುವಂತಿಲ್ಲ. ನಗರದ ವಸ್ತುಪ್ರದರ್ಶನ ಆವರಣ ಮುಂಭಾಗ ಹಾಗೂ ಜೆಕೆ ಮೈದಾನದಲ್ಲಿ ಮಾತ್ರ ನೀಡಲು ಅವಕಾ ಶನೀಡಿದೆ.
ಆಹಾರ ವಿತರಣೆಗೆ ಸಮಯ ನಿಗದಿ:
ಬೆಳಗ್ಗೆ 8ರಿಂದ 11ರ ವರಗೆ, ಮಧ್ಯಾಹ್ನ 12:30ರಿಂದ 2:30ರ ವರಗೆ ಹಾಗೂ ಸಂಜೆ 6ರಿಂದ 8ರ ವರಗೆ ಮಾತ್ರ ವಿತರಿಸಬೇಕು. ಯಾರೇ ಉಚಿತವಾಗಿ ಆಹಾರ ವಿತರಿಸಬೇಕಾದರೆ ವಲಯ ಕಚೇರಿಯ ಅಧಿಕಾರಿಗಳ ಪೂರ್ವಾನುಮತಿ ಕಡ್ಡಾಯ ಎಂದು ಪಾಲಿಕೆ ಆಯುಕ್ತೆ ಶಿಲ್ಪನಾಗ್ ಆದೇಶ ಹೊರಡಿಸಿದ್ದಾರೆ.