ಮೈಸೂರಲ್ಲಿ ಕೋವಿಡ್ ನಿಯಮ ಉಲ್ಲಂಘನೆ – ಇಂದು 278 ವಾಹನ ಸೀಜ್!

1 min read

ಮೈಸೂರು: ಮೈಸೂರಿನಲ್ಲಿ ಕರೋನಾ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬರೋಬ್ಬರಿ 278 ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ 265 ದ್ವಿಚಕ್ರ ವಾಹನ, 9 ಕಾರುಗಳು, ನಾಲ್ಕು ಆಟೋ ರಿಕ್ಷಾ ವಶಪಡಿಸಿಕೊಳ್ಳಲಾಗಿದೆ.

ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಜಂಟಿಯಾಗಿ ಕಾರ್ಯಚರಣೆ ನಡೆಸಿದ್ದು, ಹಲವು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಅಗತ್ಯವಾಗಿ ಹೊರಗೆ ಬರಬೇಡಿ. ಆಗೊಮ್ಮೆ ಹೊರಗೆ ಅಗತ್ಯ ಕೆಲಸ ಇದ್ದರೆ ಸೂಕ್ತ ದಾಖಲೆ ಜೊತೆಯಲ್ಲಿಟ್ಟುಕೊಂಡು ಹೊರಗೆ ಬರುವಂತೆಯು ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *