ಮೈಸೂರು : ದರೋಡೆಕೋರರ ಫೋಟೋ ರಿಲೀಸ್ ಮಾಡಿದ ನಗರ ಪೊಲೀಸರು!
1 min read
ಮೈಸೂರು : ಸಾಂಸ್ಕ್ರತಿಕ ನಗರಿಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಾಭರಣದ ಅಂಗಡಿಯೊಳಗೆ ಫೈರಿಂಗ್ ನಡೆಸಿದ ಮೂವರು ಆರೋಪಿಗಳ ಫೋಟೋವನ್ನ ಮೈಸೂರು ನಗರ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಘಟನೆಯಲ್ಲಿ 23 ವರ್ಷದ ಚಂದ್ರು ಮೃತಪಟ್ಟ ಯುವಕನಾಗಿದ್ದು, ಆರೋಪಿಗಳ ಪತ್ತೆಗೆ ನಗರ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ದರೋಡೆಕೋರರು ಸಾರ್ವಜನಿಕರ ಗಮನಕ್ಕೆ ಬಂದರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿದ್ದಾರೆ.

ಈ ನಂಬರ್‌ಗೆ ಸಂಪರ್ಕಿಸಿ-
9480802203,
9480802264,
9480802200.
ಸದ್ಯ ಸ್ಥಳದಲ್ಲಿ ಪೊಲೀಸರು ಶ್ವಾನದಳದ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಕೈಕಾಲು ಕಟ್ಟಿ ದರೋಡೆಗೆ ಯತ್ನಿಸಲಾಗಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.