ಚಿನ್ನದಂಗಡಿ ದರೋಡೆ ಪ್ರಕರಣ- ಘಟನಾ ಸ್ಥಳಕ್ಕೆ ಎಡಿಜಿಪಿ ಪ್ರತಾಪ್ ರೆಡ್ಡಿ, ಶಾಸಕ ರಾಮದಾಸ್ ಭೇಟಿ!
1 min readಮೈಸೂರು : ಮೈಸೂರಿನ ಚಿನ್ನದಂಗಡಿಯಲ್ಲಿ ಫೈರಿಂಗ್ ವಿಚಾರವಾಗಿ ಘಟನಾ ಸ್ಥಳಕ್ಕೆ ಶಾಸಕ ರಾಮದಾಸ್ ಹಾಗೂ ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ನೀಡಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿ ಘಟನೆ ಬಗ್ಗೆ ವಿವರ ಪಡೆದ ಪ್ರತಾಪ್ ರೆಡ್ಡಿ, ಪ್ರಕರಣದ ಸಂಪೂರ್ಣ ಮಾಹಿತಿಯನ್ನ ಕಲೆಹಾಕಿದ್ದಾರೆ.
ಚಿನ್ನದಂಗಡಿಯಲ್ಲಿನ ಸಿಸಿಟಿವಿ ದೃಶ್ಯ ಹಾಗೂ ಘಟನೆ ಬಗ್ಗೆಯು ಮಾಹಿತಿ ಕಲೆಹಾಕಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯದ ಫೋಟೋಗಳನ್ನ ಗಮನಿಸಿದ ಎಡಿಜಿಪಿ ಪ್ರತಾಪ್ ರೆಡ್ಡಿ, ವಿದ್ಯಾರಣ್ಯಪುರಂನಲ್ಲಿರುವ ಅಮೃತ್ ಗೋಲ್ಡ್ ಸಿಲ್ವರ್ ಚಿನ್ನದಂಗಡಿಯ ಆಸುಪಾಸಿನ ಮಳಿಗೆಯ ಸಿಸಿಟಿವಿ ದೃಶ್ಯವನ್ನು ಗಮನಿಸಿದ್ದಾರೆ.
ಬಳಿಕ ವಿದ್ಯಾರಣ್ಯಪುರಂನ ರಾಮಕೃಷ್ಣ ಆಸ್ಪತ್ರೆಗೆ ಭೇಟಿ ಕೊಟ್ಟು ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನ ಭೇಟಿಯಾಗಿದ್ದಾರೆ. ಈ ವೇಳೆ ಘಟನೆ ಬಗ್ಗೆಯು ಮಾಹಿತಿ ಪಡೆದಿದ್ದಾರೆ.