ಪ್ರಾಣಿಗಳನ್ನ ದತ್ತು ಪಡೆದ ಅಭಿಮಾನಿಗಳಿಗೆ ಖುದ್ದು ಡಿ ಬಾಸ್ ದರ್ಶನ್‌ರಿಂದಲೇ ಪ್ರಮಾಣ ಪತ್ರ ವಿತರಣೆ.
1 min read
ಮೈಸೂರು- ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಆ ಒಂದು ಕರೆಯ ಮೇರೆಗೆ ಕೋಟಿ ಕೋಟಿ ಆದಾಯ ರಾಜ್ಯದ ಮೃಗಾಲಯಕ್ಕೆ ಹರಿದು ಬಂದಿತ್ತು. ಈ ವೇಳೆ ಹಲವರು ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಿದ್ದರು. ಮಾತ್ರವಲ್ಲ ಇವರಿಗೆಲ್ಲ ನಟ ದರ್ಶನ ಅವರೇ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಅರ್ಪಿಸಿದ್ದರು.
ಈ ಸಾಲಿನಲ್ಲಿ ದರ್ಶನ್ ಅವರ ಅಭಿಮಾನಿಗಳು ಸಹ ದೊಡ್ಡ ಮಟ್ಟದಲ್ಲಿ ಪ್ರಾಣಿಗಳನ್ನ ದತ್ತು ಸ್ವೀಕಾರ ಮಾಡಿದ್ದರು. ಅವರಿಗಾಗಿ ಇಂದು ಮೈಸೂರು ಮೃಗಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಖುದ್ದು ಅವರಿಗೆಲ್ಲ ಡಿ ಬಾಸ್ ದರ್ಶನ್ ಅವರೇ ಪ್ರಮಾಣ ಪತ್ರ ವಿತರಿಸಿದ್ದಾರೆ.

ಹೌದು, ಮೃಗಾಲಯದಲ್ಲಿ ದರ್ಶನ್ ಅಭಿಮಾನಿಗಳಿಂದ ದತ್ತು ಸ್ವೀಕಾರ ಮಾಡಿದ ಕಾರಣ ಪ್ರಾಣಿ ದತ್ತು ಸ್ವೀಕರಿಸಿದ ದರ್ಶನ್ ಅಭಿಮಾನಿಗಳಿಗೆ ಇಂದು ಪ್ರಮಾಣಪತ್ರ ವಿತರಿಸಲಾಯಿತು. ಖುದ್ದು ಮೃಗಾಲಯಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮಾಣಪತ್ರ ವಿತರಿಸಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.