ಮೈಸೂರಿನಲ್ಲಿ ಫೈರಿಂಗ್- ಚಿನ್ನ ಕದಿಯಲು ಬಂದು ಗುಂಡು ಹಾರಿಸಿದ ಅಪರಿಚಿತರು- ಗುಂಡಿನ ದಾಳಿಗೆ ಓರ್ವ ಸಾವು!
1 min readಮೈಸೂರು : ಸಾಂಸ್ಕ್ರತಿಕ ನಗರಿಯಲ್ಲಿ ಗುಂಡಿನ ಸದ್ದು ಕೇಳಿಸಿದ್ದು, ಚಿನ್ನಾಭರಣದ ಅಂಗಡಿಯೊಳಗೆ ಫೈರಿಂಗ್ ನಡೆದಿದೆ. ಗುಂಡೇಟಿನಿಂದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ದರೋಡೆ ಮಾಡಲು ಯತ್ನಿಸಿ ತಪ್ಪಿಸಿ ಕೊಳ್ಳುವ ವೇಳೆ ಈ ಗುಂಡಿನ ದಾಳಿಯಾಗಿದೆ ಎನ್ನಲಾಗಿದೆ.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಘಟನೆ ನಡೆದಿದ್ದು, ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಯಲ್ಲಿ ಫೈರಿಂಗ್ ಆಗಿದೆ. ವಿದ್ಯಾರಣ್ಯಪುರಂನ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯೊಳಗೆ ನುಗ್ಗಿದ ಮೂವರು ದರೋಡೆಕೋರರು, ಚಿನ್ನ, ಬೆಳ್ಳಿ ಕದಿಯಲು ಯತ್ನ ಮಾಡಿದ್ದಾರೆ.
ಈ ವೇಳೆ ಇದನ್ನು ತಡೆಯಲು ಯತ್ನಿಸಿದ ಮಾಲೀಕನ ಮೇಲೆ ಗುಂಡಿನ ದಾಳಿಯಾಗಿದೆ. ದಾಳಿಯ ವೇಳೆ ಅಂಗಡಿ ಒಳಗಿದ್ದ ದಡದಹಳ್ಳಿ ಚಂದ್ರುಗೆ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.