ತವರಿನಲ್ಲಿ ಸಿದ್ದು ಕಮಾಲ್- ಜೆಡಿಎಸ್ ಕೋಟೆ ಬೇಧಿಸಿ ಗೆಲುವು ಸಾಧಿಸಿದ ಕಾಂಗ್ರೆಸ್!
1 min readಮೈಸೂರು ಮಹಾನಗರ ಪಾಲಿಕೆ ಉಪ ಚುನಾವಣೆಯ ವಾರ್ಡ್ ನಂಬರ್ 36 ಕ್ಕೆ ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ನಡೆದಿದ್ದು ಕಾಂಗ್ರೆಸ್‌ನ ರಜನಿ ಅಣ್ಣಯ್ಯ 1997 ಬಾರೀ ಮತದ ಅಂತರದಿಂದ ಗೆಲವು ಸಾಧಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡುವೆಯು ರಜನಿ ಅಣ್ಣಯ್ಯ ಗೆದ್ದು ಬೀಗಿದ್ದಾರೆ. ಮೊದಲ ಸುತ್ತಿನಿಂದ ಕೊನೆಯ ಸುತ್ತಿನವರೆಗು ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ನ ರಜನಿ ಅಣ್ಣಯ್ಯ ಗೆಲುವು ಸಾಧಿಸಿದ್ದಾರೆ.ಈ ಮೂಲಕ ಜೆಡಿಎಸ್‌ನ ಕೋಟೆಯನ್ನ ಬೇಧಿಸಿ ಕಾಂಗ್ರೆಸ್ ಪಾಲಿಕೆಯಲ್ಲಿ ಮತೊಂದು ಹೆಜ್ಜೆ ಇಟ್ಟಿದೆ.
ಸಿದ್ದರಾಮಯ್ಯರಿಂದ ರಜನಿ ಅಣ್ಣಯ್ಯ ಹೆಸರು ಘೋಷಣೆ
ಕಳೆದ ಬಾರಿ ಕೇವಲ 300 ಮತಗಳ ಆಸುಪಾಸಿನಲ್ಲಿ ಸೋತಿದ್ದ ರಜನಿ ಅಣ್ಣಯ್ಯ ಈ ಬಾರಿಯು ಅಭ್ಯರ್ಥಿಯಾಗಿದ್ದರು. ಖುದ್ದು ಮಾಜಿ ಸಿಎಂ ಸಿದ್ದರಾಮಯ್ಯರೇ ರಜನಿ ಅಣ್ಣಯ್ಯ ನಮ್ಮ ಅಭ್ಯರ್ಥಿ- ಅವರಿಗೆ ಮತ ಹಾಕಿ ಎಂದಿದ್ದರು. ಅಲ್ಲದೆ ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಕಾರಣ ಈ ಉಪ ಚುನಾವಣೆ ನಡೆದಿತ್ತು. ಇದೀಗಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಈ ಮೂಲಕ ತವರಿನಲ್ಲಿ ಸಿದ್ದು ಪ್ರಾಬಲ್ಯವು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಕೂಡ ಗೆದ್ದಿದೆ.