ಲಾಕ್‌ಡೌನ್ ವೇಳೆ ಓಡಾಡಲು ಪಾಸ್ ನೀಡುತ್ತಿಲ್ಲ: ಮೈಸೂರಿನ ನಗರ ಪೊಲೀಸ್ ಸ್ಪಷ್ಟನೆ
1 min readಮೈಸೂರು: ಮೇ.12ರ ವರೆಗು ವಿಧಿಸಿರುವ ಲಾಕ್‌ಡೌನ್ ಅವಧಿಯಲ್ಲಿ ಮೈಸೂರಿನ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸರ್ಕಾರದ ಆದೇಶದಲ್ಲಿ ವಿನಾಯ್ತಿ ನೀಡಿರುವ ಸೇವೆಗಳಿಗೆ ಮಾತ್ರ ಐಡಿ ಕಾರ್ಡ್ ಅಥವಾ ಸೂಕ್ತ ದಾಖಲಾತಿ ಇಟ್ಟುಕೊಂಡು ಪ್ರಯಾಣಿಸಬಹುದೇ ವಿನಹ’ ಅನವಶ್ಯಕವಾಗಿ ಓಡಾಡುವಂತಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟೀಕರಣ ನೀಡಿದ್ದಾರೆ.