ಮೆಡಿಕಲ್ ತ್ಯಾಜ್ಯ ಸುಡುತ್ತಿದ್ದ KVC ಆಸ್ಪತ್ರೆಗೆ 25,000 ದಂಡ ವಿಧಿಸಿದ ಮೈಸೂರು ನಗರ ಪಾಲಿಕೆ

1 min read

ಮೈಸೂರು: KVC ಆಸ್ಪತ್ರೆಯವರು ಮೆಡಿಕಲ್ ತ್ಯಾಜ್ಯವನ್ನು ಪ್ರೀಮಿಯರ್‌ ಅಪಾರ್ಟ್‌ಮೆಂಟ್ ಬಳಿ ಸುಡುತ್ತಿದ್ದವರ ವಿರುದ್ಧ ಮೈಸೂರು ಪಾಲಿಕೆ ಸಮರ ಸಾರಿದೆ. ಈ ಬಗ್ಗೆ ನಿಖರವಾದ ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕರಾದ ರಾಜೇಶ್ವರಿ ಬಾಯಿ ನೇತೃತ್ವದ ತಂಡ ತಕ್ಷಣವೇ ಸ್ಥಳಕ್ಕೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಈ ವೇಳೆ ತಾಜ್ಯ ಸುಡುತ್ತಿರುವುದು ಕಂಡು ಸ್ಥಳದಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಸಂಬಂಧಪಟ್ಟವರ ವಿರುದ್ಧ ಎಚ್ಚರಿಕೆ ನೀಡಿ ರೂ. 25,000 ದಂಡ ವಿಧಿಸಿದ್ದಾರೆ. ಅಲ್ಲದೆ ಈಗಾಗಲೇ ಮೈಸೂರು ಸ್ವಚ್ಛ ನಗರಿ ಎನಿಸಿಕೊಂಡಿದೆ. ಇದಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದೆ.

About Author

Leave a Reply

Your email address will not be published. Required fields are marked *