ಅನ್ಯಕೋಮಿನ ಯುವಕನನ್ನ ಪ್ರೀತಿಸಿದ್ದೆ ತಪ್ಪಾಯ್ತು’ ಮಗಳನ್ನ ಕೊಚ್ಚಿ ಕೊಂದ ತಂದೆ!
1 min readಅನ್ಯ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ತನ್ನ ತಂದೆಯ ಮಗಳನ್ನು ಕೊಚ್ಚಿ ಕೊಂದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ಈ ಘಟನೆ ನಡೆದಿದ್ದು, (19) ವರ್ಷದ ಗಾಯತ್ರಿ ತಂದೆಯಿಂದಲೇ ಕೊಲೆಗೀಡಾದ ಯುವತಿಯಾಗಿದ್ದಾಳೆ. ತಂದೆ ಜಯರಾಮ್ ಪುತ್ರಿ ಗಾಯತ್ರಿಯನ್ನು ಕೊಲೆಗೈದ ಆರೋಪಿಯಾಗಿದ್ದು ಗಾಯತ್ರಿಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.