ಮನೆಯಿಂದ ಹೊರ ಬಂದಾಗ ಮಾಸ್ಕ್ ಹಾಕಬೇಕೆಂದು ಮಕ್ಕಳಿಗೆ ಸಲಹೆ

1 min read

ಮೈಸೂರು: ಮೈಸೂರು ಯುವ ಬಳಗದ ವತಿಯಿಂದ ಮಾಸ್ಕ್ ದಿನಾಚರಣೆ ಅಂಗವಾಗಿ ಕೆ.ಆರ್.ಎಸ್ ಮುಖ್ಯ ರಸ್ತೆಯಲ್ಲಿರುವ ಅಂಬೇಡ್ಕರ್ ಕಾಲೋನಿಯಲ್ಲಿ ಮಕ್ಕಳಿಗೆ ಮಾಸ್ಕ್ ಹಾಕುವ ಮೂಲಕ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ನಿರ್ದೇಶಕರಾದ ರೇಣುಕ ರಾಜ್ ಕೋವಿಡ್ ಮೂರನೇ ಅಲೆ ಮಕ್ಕಳಿಗೆ ವ್ಯಾಪಕವಾಗಿ ಹರಡುವ ಸೂಚನೆ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಮೇಲೆ ಸೂಕ್ಷ್ಮವಾಗಿ ಜಾಗೃತರಾಗಿ ನೋಡಿಕೊಳ್ಳುವುದು ಪ್ರಮುಖ ಆದ್ಯ ಕರ್ತವ್ಯ. ಮಾಸ್ಕ್ ಧರಿಸುವುದು ಈಗಲೂ ಬಹುಮುಖ್ಯ. ಮಾಸ್ಕ್ ಧರಿಸಿ ಜೀವ ಉಳಿಸಿ. ಜಾಗತಿಕ ಸಮುದಾಯಗಳ ಮೇಲೆ ಕೋವಿಡ್ ಪರಿಣಾಮ ಬೀರುತ್ತಿದೆ. ಸೋಂಕು ಹರಡುವಿಕೆ ತಡೆಗೆ ಸಹಾಯ ಮಾಡಬೇಕಿದೆ’ ಮಾಸ್ಕ್ ಧರಿಸಿ, ಕೈಗಳನ್ನು ತೊಳೆಯುತ್ತಿರಿ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಲಾಯಿತು.

ಕೋವಿಡ್ ವಿರುದ್ಧ ಹೊರಾಡಲು ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಜೊತೆ ಆಗಾಗ್ಗೆ ಸಾನಿಟೈಸರ್ ಬಳಕೆ, ಈ ಮೂರು ಅಸ್ತ್ರಗಳು ಪಾಲನೆ ಮಾಡಲೇಬೇಕು. ಅದರಲ್ಲೂ ಮಾಸ್ಕ್ ಅನ್ನುವ ಅಸ್ತ್ರ ಪ್ರಮುಖವಾಗಿದೆ. ಹಾಗಾಗಿ ದೇಶದಲ್ಲಿಯೇ ಯಾರು ಮಾಡದ ರೀತಿಯಲ್ಲಿ ಕರ್ನಾಟಕ ಸರ್ಕಾರ ಮಾಸ್ಕ್ ಅಭಿಯಾನ ನಡೆಸಿ, ಶೇ 99ರಷ್ಟು ಯಶಸ್ಸು ಕಂಡಿದೆ. ಮನೆಯಿಂದ ಹೊರ ಬಂದಾಗ ಮಾಸ್ಕ್ ಹಾಕಬೇಕೆಂದು ಮಕ್ಕಳಿಗೆ ಸಲಹೆ ನೀಡಿದರು. ಇದೇವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರಾದ ರೇಣುಕರಾಜ, ಬಿಜೆಪಿ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಗೌಡ ,ಮೈಸೂರು ಯುವ ಬಳಗದ ಅಧ್ಯಕ್ಷರಾದ ನವೀನ್, ಪಾಪಣ್ಣ ಹಾಗೂ ಇನ್ನಿತರರು ಹಾಜರಿದ್ದರು.

About Author

Leave a Reply

Your email address will not be published. Required fields are marked *