ಯಾವ ಹಠಕ್ಕೆ SSLC ಪರೀಕ್ಷೆ ಮಾಡಬೇಕು ಅಂತಿದ್ದೀರಾ: ಸರ್ಕಾರದ ಹೆಚ್.ವಿಶ್ವನಾಥ್ ಆಕ್ರೋಶ

1 min read

ಮೈಸೂರು: ಸರ್ಕಾರದ ನಿರ್ಧಾರದಿಂದ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ. ಈ‌ ಸಂಧರ್ಭದಲ್ಲಿ SSLC ಪರೀಕ್ಷೆ ಬೇಕಾಗಿರಲಿಲ್ಲ ಅಂತ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.

ಸರ್ಕಾರ ಹಾಗೂ ಸಚಿವರು ಇಗೋ(EGO) ಬಿಟ್ಟು ಕೆಲಸ ಮಾಡಬೇಕಿದೆ. ಮಗುವನ್ನು ಮರೆತ ಸರ್ಕಾರ ಇದು. 10-15 ದಿನದಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಸಂಧರ್ಭದಲ್ಲಿ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ತಜ್ಞರ ಸಲಹೆ ಪಡೆದಿಲ್ಲ, ಹಿಂದೆ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ಕೆಲಸ ಮಾಡಿದವರ ಸಲಹೆ ಪಡೆದಿಲ್ಲ. ಏಕಾ ಏಕಿ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ. ಇಡೀ ಜಗತ್ತೆ ಕೊರೊನಾ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಅವೈಜ್ಞಾನಿಕ ಎಂದರು.

ಯಾವ ಹಠಕ್ಕೆ ಪರೀಕ್ಷೆ ಮಾಡಬೇಕು ಅಂತಿದ್ದೀರಾ. ಕೇಂದ್ರ ಸರ್ಕಾರ ಸಿಬಿಎಸ್ ಸಿ ಪರೀಕ್ಷೆಯನ್ನೆ ರದ್ದು ಮಾಡಿದೆ. ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಅಂತ ಹೇಳಿದೆ. ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡಲಾಗುತ್ತಿದೆ. ಜೀವ ಮತ್ತು ಜೀವನ ಎರಡನ್ನು ತಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿಯವರೆ ಜೀವ ಮುಖ್ಯ ನಂತರ ಜೀವನ ಅಂತ ಹೇಳಿದ್ದಾರೆ. ಆದ್ರೆ ಸಚಿವ ಸುರೇಶ್ ಕುಮಾರ್ ನನಗೆ ಎಲ್ಲ ಗೊತ್ತು ಎಂಬ ಇಗೋ ಇದೆ. ಇಂತಹ ಇಗೋ ಇರಬಾರದು. ಅಂತ ಸಚಿವ ಸುರೇಶ್ ಕುಮಾರ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಕೆಲವು ತಜ್ಞರು ಸರ್ಕಾರದ‌ ಮರ್ಜಿನಲ್ಲಿದ್ದಾರೆ. ಡಾ.ದೇವಿಶೆಟ್ಟಿಯವರೆ ಮೂರನೇ ಅಲೆ ಬರುತ್ತೆ ಅಂತಾರೆ. ಆದರೆ ಪರೀಕ್ಷೆ ಮಾಡಬಹುದು ಅಂತಾರೆ. ದೇವಿಶೆಟ್ಟಿಯವರು ಎರಡೂ ಹೇಳಿಕೆಯನ್ನು ಕೊಡುತ್ತಿದ್ದಾರೆ. ಯಾಕಾಗಿ ಈ ರೀತಿ ಹೇಳುತ್ತಿದ್ದಾರೆ ಗೊತ್ತಿಲ್ಲ. ಜೀವವನ್ನು ರಕ್ಷಿಸುವ ಕೆಲಸವಾಗಬೇಕು. ಸುಧಾಕರ್ ರವರಿಗೆ ಪರೀಕ್ಷೆ ವಿಚಾರ ಗೊತ್ತಿಲ್ಲ ಅಂತಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ ಅಂತ ಸುದ್ದಿಗೋಷ್ಠಿಯಲ್ಲಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *