ಮೈಸೂರಿನಲ್ಲಿ ಮುಡಾ ಅಧಿಕಾರಿಗಳ ಕಾರ್ಯಾಚರಣೆ: 7 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ
1 min read
ಮೈಸೂರು: ಮೈಸೂರಿನಲ್ಲಿ ಮುಡಾ ಅಧಿಕಾರಿಗಳು ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ 7 ಕೋಟಿ 90 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಮೈಸೂರು ತಾಲೂಕು ಕಸಬಾ ಹೋಬಳಿಯ ಹಿನಕಲ್ ಗ್ರಾಮದ ಸರ್ವೆ ನಂಬರ್ 9ರಲ್ಲಿ 33 ಗುಂಟೆ ಜಮೀನು ಮುಡಾ ವಶಕ್ಕೆ ಪಡೆದಿದೆ. ಸದರಿ ಸ್ವತ್ತಿನ ಭೂ ಮಾಲೀಕರಿಗೆ ಪರಿಹಾರದ ಮೊಬಲಗನ್ನು ಪಾವತಿಸಿದ್ದ ಮುಡಾ. ಆದರೂ ಸದರಿ ಸ್ವತ್ತಿನಲ್ಲಿ ಅನಧಿಕೃತ ಶೆಡ್ ಗಳನ್ನು ನಿರ್ಮಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮುಡಾ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು. ಮುಡಾ ಆಯುಕ್ತ ಡಾ. ಡಿ ಬಿ ನಟೇಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ.
