ಮೈಸೂರಿನಲ್ಲಿ ಎರಡು ಕರೋನಾ ಹಾಟ್ ಸ್ಪಾಟ್ ಇದೆ: ಆರೋಗ್ಯ ಸಚಿವ ಸುಧಾಕರ್
1 min readಮೈಸೂರು: ರಾಜ್ಯದಲ್ಲಿ ವಾಕ್ಸಿನ್ ಕೊರತೆಯೇ ಇಲ್ಲ ಅಂತ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿನಕ್ಕೆ ಈಗಲೂ ಎರಡ್ಮೂರು ಲಕ್ಷ ವಾಕ್ಸಿನ್ ಕೊಡುತ್ತಿದ್ದೇವೆ. ಈಗಲು ನಮ್ಮ ಬಳಿ ಐದು ಲಕ್ಷ ವಾಕ್ಸಿನ್ ದಾಸ್ತಾನು ಇದೆ. ರಾಜ್ಯದಲ್ಲಿ ಡ್ರೈ ಎನ್ನುವ ಪರಿಸ್ಥಿತಿಯೇ ಬಂದಿಲ್ಲ. ಕೇಂದ್ರದವರ ಜೊತೆ ನಾವು ಮಾತನಾಡಿದ್ದೇವೆ. ನಾಳೆ ಮತ್ತಷ್ಟು ವಾಕ್ಸಿನ್ ರಾಜ್ಯಕ್ಕೆ ಬರಲಿದೆ. ದೇಶದಲ್ಲೇ ಅತೀ ಹೆಚ್ಚು ವಾಕ್ಸಿನ್ ಕೊಟ್ಟ ರಾಜ್ಯ ನಮ್ಮದು ಅಂತ ಹೇಳಿದರು. ಆದರೆ ವಾಕ್ಸಿನ್ ವಿಚಾರದಲ್ಲಿ ಡಾ.ಸುಧಾಕರ್ ಅವರು ಸುಳ್ಳು ಹೇಳಿದ್ರಾ ಎಂಬ ಪ್ರಶ್ನೆ ಇದೀಗ ಮೂಡಿದೆ.
ರಾಜ್ಯದಲ್ಲಿ ಒಟ್ಟು 20 ಕರೋನಾ ಹಾಟ್ ಸ್ಪಾಟ್: ರಾಜ್ಯದಲ್ಲಿ ಒಟ್ಟು 20 ಕರೋನಾ ಹಾಟ್ ಸ್ಪಾಟ್ ಗುರ್ತಿಸಿದ್ದೇವೆ. ಮೈಸೂರಿನಲ್ಲಿ ಎರಡು ಹಾಟ್ ಸ್ಪಾಟ್ ಇದೆ. ಪಿರಿಯಾಪಟ್ಟಣ ಹಾಗೂ ಬನ್ನೂರು ಎರಡು ಹಾಟ್ ಸ್ಪಾಟ್ ಆಗಿದೆ. ಇದನ್ನ ಕಂಟೋನ್ಮೆಂಟ್ ಜೋನ್ ಮಾಡಬೇಕಿದೆ. ಮೈಸೂರಿನಲ್ಲಿ ಡೆಲ್ಟಾ ಪ್ಲಸ್ ಲ್ಯಾಬ್ ಆರಂಭಕ್ಕೆ ಸಿದ್ದತೆ ಮಾಡುತ್ತಿದ್ದೇವೆ ಅಂತ ಹೇಳಿದರು.
ರಾಜ್ಯದಲ್ಲಿ ಪರೀಕ್ಷೆ ನಡೆಯುವ ವಿಚಾರ: ಮುಖ್ಯಮಂತ್ರಿಯೇ ಹೇಳಿದ ಮೇಲೆ ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಏನಿಲ್ಲ ಅಂತ ಈ ಬಗ್ಗೆ ಪ್ರಶ್ನೆಗೆ ವಿವರಣೆ ನೀಡಲು ಸಚಿವ ಸುಧಾಕರ್ ನಿರಾಕರಿಸಿದರು.