ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನ ಹಬ್ಬದಂತೆ ಆಚರಿಸಿ- ಶಾಸಕ ರಾಮದಾಸ್ ಕರೆ!

1 min read

ಭಾರತೀಯ ಜನತಾ ಪಾರ್ಟಿ ರಾಜ್ಯ ಘಟಕದಿಂದ ಬಂದಿರುವ ನಿರ್ದೇಶನದಂತೆ ಇಂದು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ನಂ 64 ರ ಬೂತ್ ಅಧ್ಯಕ್ಷರ ಮನೆಯ ಮೇಲೆ ಬಿಜೆಪಿ ದ್ವಜ ಕಟ್ಟುವ ಹಾಗೂ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ವಾರ್ಡ್ ನಂ 64 ರ ಎಲ್ಲಾ ಬೂತ್ ಅಧ್ಯಕ್ಷರ ಮನೆಗಳಿಗೆ ಶಾಸಕರು ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಖುದ್ದಾಗಿ ಭೇಟಿ ನೀಡಿದರು.

ಕೆ.ಆರ್.ಕ್ಷೇತ್ರದಲ್ಲಿ ಬೂತ್ ಅಧ್ಯಕ್ಷರ ಮನೆ ಮುಂದೆ ಬಂದು ಪೇಜ್ ಪ್ರಮುಖರನ್ನು ಆಯ್ಕೆ ಮಾಡುವ ಪ್ರಕ್ರಿಯೆ ರಾಜ್ಯದಲ್ಲಿ ಸಂಘಟನೆ ದೃಷ್ಟಿಯಿಂದ ಬಹು ವಿಶೇಷವಾಗಿದೆ. ಪೇಜ್ ಪ್ರಮುಖರ ಕಾರ್ಯ ಬರಿಯ ಚುನಾವಣಾ ದೃಷ್ಠಿಯಿಂದ ಮಾತ್ರ ಅಲ್ಲ ತಮ್ಮ ಪೇಜ್ ನಲ್ಲಿ ಬರುವ 8, 10 ಮನೆಗಳ ಯೋಗಕ್ಷೇಮ ವಿಚಾರಿಸುವ ಕಾರ್ಯವೂ ಅವರದ್ದಾಗಿರುತ್ತದೆ. ನೀವು ಮಾಡುವಂತಹ ಈ ಪುಣ್ಯ ಕಾರ್ಯ ನಿಮ್ಮ ಕುಟುಂಬವನ್ನು ಕಾಯುತ್ತದೆ. ಪ್ರಧಾನಿ ಮೋದಿಜಿ ಅವರು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ, ಅದನ್ನು ಅನುಷ್ಠಾನ ಮಾಡುವ ಜವಾಬ್ದಾರಿ ಪೇಜ್ ಪ್ರಮುಖರದಾಗಿರುತ್ತದೆ. ಇಂತಹ ಯೋಜನೆಗಳನ್ನು ನಾವು ಜನಕ್ಕೆ ತಲುಪಿಸಿದಾಗ ಅವರಿಗಾದ ಆನಂದ ಹೇಳತೀರದು. ಮುಂದಿನ ದಿನಗಳಲ್ಲಿ ಪೇಜ್ ಪ್ರಮುಖರಿಗೆ ಸರ್ಕಾರಿ ಯೋಜನೆಗಳ ಅನುಷ್ಠಾನದ ಬಗ್ಗೆ ಪ್ರತಿ ವಾರ್ಡ್ ನಲ್ಲೂ ಟ್ರೈನಿಂಗ್ ನೀಡುವ ಕೆಲಸ ಮಾಡುತ್ತೇವೆ, 15 ನೆ ತಾರೀಖು ಸ್ವಾತಂತ್ರ್ಯ ದಿನ, ಅಂದಿನ ದಿನದಂದು ಬೂತ್ ಅಧ್ಯಕ್ಷರು ತಮ್ಮ ಮನೆಯ ಮುಂದೆ ಧ್ವಜಾರೋಹಣ ಮಾಡಿ ಹಬ್ಬದ ರೀತಿ ಆಚರಿಸಬೇಕು. ಇದು ಎಲ್ಲರೂ ಸೇರಿ ಮಾಡುವಂಥಹ ಸಮಾಜದ ಕೆಲಸವಾಗಿದೆ ಎಂದರು.

ವಿಶೇಷವಾಗಿ ಹೋದ ಬೂತ್ ನಲ್ಲಿ ಸ್ಥಳೀಯ ನಾಗರೀಕರೂ ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದರು ಅಲ್ಲದೇ ನಾವೂ ನಿಮ್ಮೊಂದಿಗೆ ಇದ್ದೇವೆ ಎನ್ನುವ ಸಂದೇಶವನ್ನು ಕೊಟ್ಟರು. ಹಲವಾರು ಹಿರಿಯ ನಾಗರೀಕರು ಮಂತ್ರಿ ಸ್ಥಾನ ಸಿಗದೇ ಇದ್ದದ್ದು ಬೇಜಾರಾಗಿದೆ, ಮುಂದೆ ಆ ದೇವರು ಒಳ್ಳೆ ರೀತಿಯ ಆಶೀರ್ವಾದ ಮಾಡುತ್ತಾನೆ ಎಂದು ಶುಭ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಭಾಜಪಾ ಆದ್ಯಕ್ಷರಾದ ಎಂ.ವಡಿವೇಲು ರವರು , ಸ್ಥಳೀಯ ನಗರಪಾಲಿಕಾ ಸದಸ್ಯರಾದ ಚಂಪಕ, ಉಪಾಧ್ಯಕ್ಷರಾದ ಸಂತೋಷ್ ಶಂಭು, ಪ್ರಧಾನ ಕಾರ್ಯದರ್ಶಿಯಾದ ನಾಗೇಂದ್ರ ಕುಮಾರ್,ಓಂ ಶ್ರೀನಿವಾಸ್, ವಾರ್ಡ್ ಉಸ್ತುವಾರಿ ಬಿ ಕೆ ಮಂಜುನಾಥ್, ವಾರ್ಡ್ ಅಧ್ಯಕ್ಷರಾದ ಗೋಪಾಲ್, ಬೂತ್ ಅಧ್ಯಕ್ಷರು, ಪ್ರಮುಖರಾದ ಪ್ರಸಾದ್ ಬಾಬು, ಹೇಮಂತ್ ಕುಮಾರ್, ನೂರ್ ಫಾತಿಮಾ, ನಾಗೇಶ್,ಗಿರೀಶ್, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *