ಶಾಸಕ‌ ಜಿ.ಟಿ.ದೇವೇಗೌಡರಿಂದ 13 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ.

1 min read

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಲವಾಲ-ಕೆ.ಆರ್.ನಗರ ರಸ್ತೆಯಿಂದ ಸಾಗರಕಟ್ಟೆ ಮೂಲಕ ರಾಮನಹಳ್ಳಿಗೆ ಸೇರುವ ರಸ್ತೆಯನ್ನು ರೂ. 5 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

  • ಬಳಿಕ 4 ಕೋಟಿ 50 ಲಕ್ಷ ವೆಚ್ಚದಲ್ಲಿ ಗುಂಗ್ರಾಲ್ ಛತ್ರ ಗ್ರಾಮದಿಂದ ದಡದಕಲ್ಲಹಳ್ಳಿಗೆ ಸೇರುವ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು.

3 ಕೋಟಿ 50 ಲಕ್ಷ ವೆಚ್ಚದಲ್ಲಿ ಇಲವಾಲ ಗ್ರಾಮದಿಂದ ಅಲೋಕ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಗೆ ಚಾಲನೆ ನೀಡಿದರು ಹಾಗೂ ಇಲವಾಲ ಗ್ರಾಮದಲ್ಲಿ ರೂ 32 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ‌ ನೀಡಿದರು.

ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೀಲಾವತಿ ಉಪಾಧ್ಯಕ್ಷರಾದ ಮಂಜುಳ
ಸದಸ್ಯರುಗಳಾದ ಯದುವರ, ಮಾದೇಗೌಡ, ಯಲಚಹಳ್ಳಿ ರವಿ, ವಿಜಯ್ ಕುಮಾರ್, ಶಿವಣ್ಣನಾಯಕ, ಲೋಕೇಶ್ ನಾಯಕ, ವಿಜಯ್ ಕುಮಾರ್, ಗೀತಾ, ಪಲ್ಲವಿ,ಯೋಗಮೂರ್ತಿ,

ಮುಖಂಡರಾದ ಹೋಸಕೋಟೆ ನಾಗರಾಜು, ಇಲವಾಲ ನಾಗರಾಜು, ರವಿ, ಸುಪ್ರೀತ್,ರಮೇಶ್, ಆದರ್ಶ, ರಮೇಶ್, ಪ್ರಸನ್ನ, ಸ್ವಾಮಿ, ತಾಂಡವಮೂರ್ತಿ, ಕುಮಾರ, ಬದನಾಳ ಹಾಗೂ ಇ.ಇ.ಹೇಮಂತ್ ಕುಮಾರ್, ಎ.ಇ.ಇ.ರಾಜು, ಜಗದೀಶ್, ಇ.ಓ.ರಮೇಶ್, ಲಾವಣ್ಯ ಕುಬೇರ ಹಾಗೂ ಹಲವಾರು ಮುಖಂಡರು‌ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *