ಮೈಸೂರಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ(IMF)ಯ ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್ ಭೇಟಿ
1 min read
ಮೈಸೂರು: ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಮುಖ್ಯ ಆರ್ಥಿಕ ಸಲಹೆಗಾರ್ತಿ ಗೀತಾ ಗೋಪಿನಾಥ್ ಅವರು ಮೈಸೂರಿಗೆ ಆಗಮಿಸಿದ್ದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರನ್ನು ಭೇಟಿ ಮಾಡಿ, ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಕೂರೂನ ಸಮಸ್ಯೆ ಪರಿಹಾರ ಕ್ರಮಗಳು ಹಾಗೂ ರೈತರ ಕೃಷಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಗೀತಾ ಗೋಪಿನಾಥ್ ಅವರು ಪ್ರವಾಸೋದ್ಯಮಕ್ಕೆ, ಸೇವಾ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಕೃಷಿ ಕ್ಷೇತ್ರಕ್ಕೂ ಕೊರೂನ ಸಮಸ್ಯೆ ಉಂಟು ಮಾಡಿದೆ ಎಂದರು ಪ್ರಪಂಚದ ಎಲ್ಲ ರಾಷ್ಟ್ರಗಳು ಕುರೂನ ಲಸಿಕೆಯನ್ನು ಎಲ್ಲ ಜನರಿಗೂ ಕಡ್ಡಾಯವಾಗಿ ಹಾಕಬೇಕೆಂದು ಜಿ-20 ರಾಷ್ಟ್ರಗಳ ಸಭೆಯಲ್ಲಿ ಚರ್ಚಿಸಲು ಚಿಂತನೆ ನಡೆಸಲಾಗುತ್ತಿದೆ ಎಂದರು ಅಂತ ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗೀತಾ ಗೋಪಿನಾಥ್ ಅವರ ತಂದೆ ರೈತ ಮುಖಂಡರು ಸಮಾಜಸೇವಕರಾದ ಟಿ ವಿ ಗೋಪಿನಾಥ್ ಉಪಸ್ಥಿತರಿದ್ದರು