ಗಲಾಟೆ ಎಂದು ಕರೆ ಬಂದ ತಕ್ಷಣವೇ ಎಂಟ್ರಿ ಕೊಟ್ಟ ನಂಜನಗೂಡು ಟೌನ್ EVR ವಾಹನದ ಪೊಲೀಸರು!
1 min readಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ನಂಜನಗೂಡಿನ ಚಾಮಲಾಪುರ ಬೀದಿಯಲ್ಲಿ ಗಲಾಟೆಯ ಮಾಹಿತಿ ಪಡೆದ 112 ಸಂಖ್ಯೆಗೆ ಬಂದ ಕರೆಯ ಅನ್ವಯ ERV ವಾಹನದ ಮೂಲಕ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸರು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.
ಭೇಟಿ ನೀಡಿ ವಿಚಾರಿಸಿದ್ದ ವೇಳೆ ಇದು ಅಕ್ಕ ಪಕ್ಕದ ಮನೆಯ ಗಲಾಟೆಯಾಗಿದ್ದು, ಇಬ್ಬರು ಮನೆಯವರಿಗೆ ಅನಗತ್ಯ ಗೊಂದಲ ಹಾಗೂ ಗಲಾಟೆ ಮಾಡದಂತೆ ಎಚ್ಚರಿಕೆಯ ತಿಳುವಳಿಕೆ ನೀಡಲಾಗಿದೆ. ಅಲ್ಲದೆ ಯಾರು ಕೂಡ ಗಲಾಟೆ ಮಾಡಿಕೊಳ್ಳದಂತೆ ಹಾಗೂ ಶಾಂತಿ ಕಾಪಾಡುವಂತೆ ಸೂಚಿಸಲಾಗಿದೆ.