ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ: ಶಿಲ್ಪಾನಾಗ್
1 min readಮೈಸೂರು: ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆದಿದ್ದೇನೆ ಅಂತ ಮೈಸೂರಿನಲ್ಲಿ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.
ನಾನು ರಾಜೀನಾಮೆ ಕೊಟ್ಟಿದ್ದೆ ಒಂದೇ ಉದ್ದೇಶಕ್ಕೆ. ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದು ಅಂತ. ಆದರೆ ಇದೀಗಾ ನಾನು ಹಾಗೂ ಅವರು ವರ್ಗಾವಣೆ ಆಗಿದ್ದಾರೆ. ನನ್ನ ರಾಜೀನಾಮೆ ಆದೇಶ ವಾಪಾಸ್ ಪಡೆದಿದ್ದೇನೆ ಅಂತ ಮೈಸೂರಿನಲ್ಲಿ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಎಲ್ಲರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಡಿಸಿ, ಪೊಲೀಸ್ ಇಲಾಖೆ ಸೇರಿ ಪಾಲಿಕೆ ಅಧಿಕಾರಿಗಳು ಸಹ ಕೆಲಸ ಮಾಡಿದ್ದಾರೆ. ಯಾರು ಸಹ ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿಲ್ಲ. ಎಲ್ಲರು ಹೊರಗೆ ಬಂದು ಉತ್ತಮವಾದ ಕೆಲಸ ಮಾಡಿದ್ದಾರೆ.
ಮೈಸೂರಿನ ಜನರು ಅತ್ಯುತ್ತಮವಾ್ ಸಹಕಾರ ನೀಡಿದ್ದಾರೆ. ನಾವು ಮಾಡಿದ ಆದೇಶವನ್ನು ಜನರು ಪರಿಪಾಲನೆ ಮಾಡಿದ್ದಾರೆ. ಮೈಸೂರಿನ ಜನರು, ಅಧಿಕಾರಿ ವರ್ಗ, ಮಾಧ್ಯಮದವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಲ್ಲಿ ಕೆಲಸ ಮಾಡಿದ್ದು ತುಂಭಾ ಖುಷಿಯಾಗಿದೆ ಅಂತ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದ್ದಾರೆ.