ನನಗೆ ಯಡಿಯೂರಪ್ಪ ಮೇಲೆ ಅನುಕಂಪ ಇದೆ: ಹೆಚ್ ವಿಶ್ವನಾಥ್

1 min read

ಮೈಸೂರು: ಹೈಕಮಾಂಡ್ ಸೂಚಿಸಿದ್ರೆ ತಕ್ಷಣ ರಾಜೀನಾಮೆ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಎಂಎಲ್ ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಇದು ನಿರೀಕ್ಷಿತವಾದದ್ದು, ಇಡೀ ನಾಡು ಇದನ್ನು ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಗಾಡಿಯ ಕಥೆಯ ಉದಾಹರಣೆ ಕೊಟ್ಟಿದ್ದಾರೆ. ಗಾಡಿ ಕೆಳಗ ಹೋಗಿ ನಾನೇ ಎಳೆಯುತ್ತಿದ್ದೇನೆ ಅಂತಾ ಅಂದುಕೊಂಡಂತೆ. ಯಡಿಯೂರಪ್ಪ ಅವರ ಹೇಳಿಕೆ ದೊಡ್ಡ ಮಾತು. ದೆಹಲಿ ಹೇಳಿದಂಗೆ ನಡೆದುಕೊಳ್ಳುವುದು ಪರಿಪಾಠ. ದೆಹಲಿ ಬೇರೆಯವರು ಆಗಲಿ ನಿಮ್ಮ ಆರೋಗ್ಯ ಸರಿ ಇಲ್ಲ ಅಂತಾ ಹೇಳಿದ್ದಾರೆ. ಪರ್ಯಾಯ ನಾಯಕ‌ ಇದ್ದಾರೆ ಅಂತಾ ಹೇಳಿರುವುದು ದೊಡ್ಡ ಮಾತು. ಇದು ಸ್ವಾಗತಾರ್ಹ ವಿಚಾರ. ಆ ರೀತಿ ಹೇಳಿದರೆ ಅದು ಗರ್ವದ ಮಾತಾಗುತ್ತದೆ.

ಬಿಜೆಪಿ ಕಟ್ಟಿದವರಲ್ಲಿ ಅವರ ಶ್ರಮ ಹೆಚ್ಚಾಗಿದೆ. ರಾಜ್ಯದ ಜನರು ನಾಯಕರಿಗೆ ಅವರ ಮೇಲೆ ತುಂಬಾ ಗೌರವ ಇದೆ. ರಾಜ್ಯದ ಜನರು ಅಭಿವೃದ್ಧಿ ಹಿತದೃಷ್ಟಿಯಿಂದ ಈ ಮಾತು. ಅಧಿಕಾರ ಬಿಟ್ಟು ಕೆಳಗೆ ಇಳಿಯುತ್ತೇನೆ ಅಂತಾ ಹೇಳಿರುವುದು ಸ್ವಾಗತಾರ್ಹ. ಅವರ ವಯಸ್ಸು ಆರೋಗ್ಯ ನಾಡಿನ ಅಭಿವೃದ್ಧಿ ಆಡಳಿತದ ಮೇಲಿನ ಪರಿಣಾಮ ನೋಡಿ. ಆರ್ ಎಸ್ ಎಸ್, ಹೈಕಮಾಂಡ್ ಈ ನಿರ್ಧಾರ ಕೈಗೊಂಡಿದೆ.

ನನಗೆ ಯಡಿಯೂರಪ್ಪ ಮೇಲೆ ಅನುಕಂಪ ಇದೆ. ಅವರ ವಯಸ್ಸಿನ ಮೇಲೆ ಮಾತನಾಡುತ್ತಿದ್ದೇನೆ. ಅವರು ಅದಕ್ಷರು, ಅಪ್ರಾಮಾಣಿಕರು ಅಂತಾ ಅಲ್ಲ. ರಾಜೀನಾಮೆ ಕೊಟ್ಟರು ತೆಗೆದುಕೊಂಡರು ಅನ್ನುವುದಲ್ಲ. ಪಕ್ಷದ ಹಿತದೃಷ್ಟಿ ಮುಖ್ಯ ಅಷ್ಟೇ. ಕ್ಯಾಪ್ಟನ್ ಬದಲಾಗುತ್ತಿದ್ದಾರೆ, ಆಟಗಾರರು ಬದಲಾಗಬೇಕು. ಹೊಸ ಕ್ಯಾಪ್ಟನ್ ತನಗೆ ಬೇಕಾದ ಆಟಗಾರರನ್ನು ಅವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ದೊಡ್ಡ ಬುದ್ದಿವಂತಿಕೆ ಬೇಕಿಲ್ಲ, ಎಲ್ಲರನ್ನೂ ಪ್ರೀತಿಸುವ ಸಾಮಾನ್ಯ ಜ್ಞಾನ ಇರುವುದು ಸಾಕು. ಅಧಿಕಾರಿಗಳಿಗೆ ಅಂಕುಶ ಹಾಕುವವರು ರಾಜ್ಯದ ಅಭಿವೃದ್ಧಿ ಬಗ್ಗೆ ಗಮನಹರಿಸುವ ನಾಯಕ‌ ಬೇಕು. ಸದ್ಯ ಪರಿಸ್ಥಿತಿ ಕ್ಲಿಷ್ಟಕರವಾಗಿದೆ. ಇದೆಲ್ಲವನ್ನೂ ನಿಭಾಯಿಸುವ ನಾಯಕ ಬೇಕು. ಹಲವು ನಾಯಕತ್ವಗಳು ಕುಟುಂಬ ರಾಜಕಾರಣದಿಂದ ಹೊರಟು ಹೋಗಿದೆ.

ವಿಜಯೇಂದ್ರ ಕಾರಣವಾ ಎನ್ನುವ ಮಾತಿಗೆ ಉತ್ತರ: ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಧಕ್ಕೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಸಹಾ ಹೇಳಿದ್ದಾರೆ ಅಂತ ಎಚ್ ವಿಶ್ವನಾಥ್ ಹೇಳಿಕೆ ನಿಡಿದ್ದಾರೆ.

ಡಿಸಿ ಹಾಗೂ ಪಾಲಿಕೆ ಆಯುಕ್ತೆ ವರ್ಗಾವಣೆ ವಿಚಾರ: ಸರ್ಕಾರ ಅತ್ಯಂತ ನಾಜೂಕಾಗಿ ಸಮಸ್ಯೆ ಬಗೆಹರಿಸಿದೆ. ಇಬ್ಬರು ಅಧಿಕಾರಿಗಳು ವರ್ಗಾವಣೆ ಆಗಿದ್ದಾರೆ. ಆದರೆ ಇಬ್ಬರೂ ಹೊರಗೆ ಹೋಗುವಂತೆ ಮಾಡಿದವರು ನಾವುಗಳು. ಅಂದರೆ ಜನಪ್ರತಿನಿಗಳು ಉಂಟುಮಾಡಿದ ಗೊಂದಲಗಳಿಂದಾಗಿ ಅಧಿಕಾರಿಗಳು ಹೊರಗೆ ಹೋಗುವಂತಾಯಿತು ಅಂತ ಹೇಳಿದರು.

About Author

Leave a Reply

Your email address will not be published. Required fields are marked *