ಗೃಹ ಸಚಿವ ಅರಗ ಜ್ಞಾನೇಂದ್ರರಿಂದ ಮೈಸೂರಿನಲ್ಲಿ ಫೈರಿಂಗ್..!
1 min readಮೈಸೂರು: ಮೈಸೂರಿಗೆ ಆಗಮಿಸಿರುವ ಗೃಹ ಸಚಿವ ಅರಗ ಜ್ಞಾನಂದ್ರ, ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಭೇಟಿ ನೀಡಿ ಫೈರಿಂಗ್ ಸಿಮ್ಯುಲೇಟರ್ ಉದ್ಘಾಟನೆ ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಅಕಾಡೆಮಿಯ ವಿವಿಧ ವಿಭಾಗಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು. ಈ ವೇಳೆ ಅಧಿಕಾರಿಗಳು ಪೊಲೀಸ್ ಫೈರಿಂಗ್ ತರಬೇತಿ ಬಗ್ಗೆ ವಿವರ ನೀಡಿದರು. ಈ ಸಂದರ್ಭದಲ್ಲಿ ಗೃಹ ಸಚಿವರು ಪಿಸ್ತೂಲ್ ನಿಂದ ನಿಗಧಿತ ಸ್ಥಳದತ್ತ ಗುರಿಯಿಟ್ಟು ಫೈರಿಂಗ್ ಮಾಡಿದರು. ಮೊದಲ ಬಾರಿ ನಿಗಧಿತ ಗುರಿಯತ್ತ ನಿಖರವಾಗಿ ಫೈರಿಂಗ್ ಮಾಡಿದರು. ಆನಂತರದ ಪ್ರಯತ್ನಗಳಲ್ಲಿ ನಿಗಧಿತ ಗುರಿಯತ್ತ ಫೈರಿಂಗ್ ಮಾಡುವಲ್ಲಿ ವಿಫಲರಾದರು.
Video Link: https://www.facebook.com/NannuruMysuru/videos/232058518710801