ಮೈಸೂರಿನಲ್ಲಿ ದರೋಡೆ- ಫೈರಿಂಗ್ ಮಾಡಿದ 6 ಮಂದಿ ಪೊಲೀಸರ ವಶಕ್ಕೆ!

1 min read

ಡಕಾಯಿತಿ, ಫೈರಿಂಗ್ ವಿಚಾರವಾಗಿ ಮೈಸೂರಿನಲ್ಲಿ ಡಿಜಿ & ಐಜಿ ಸುದ್ದಿಗೋಷ್ಠಿ ನಡೆಸಿದ್ದು, ಐದು ಟೀಂನಿಂದ ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿದ್ರು. ಮೈಸೂರು ಪೊಲೀಸ್ ಆಯುಕ್ತರು ತಂಡ ರಚನೆ ಮಾಡಿದ್ರು. ಪ್ರಕರಣ ಸಂಬಂಧ ಆರು ಮಂದಿಯ ಬಂಧನ. ಮೈಸೂರಿನ ಒಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರು. ವೆಸ್ಟ್ ಬೆಂಗಾಲ್, ಮುಂಬಯಿ, ರಾಜಸ್ಥಾನ, ಜಮ್ಮು ಅಂಡ್ ಕಾಶ್ಮೀರ್‌ನಲ್ಲಿ ಅರೆಸ್ಟ್ ಮಾಡಲಾಗಿದೆ. 8 ಮಂದಿಯಲ್ಲಿ 6 ಮಂದಿಯನ್ನ ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಪ್ಲಾನ್ ಮಾಡಿದ್ದು ಮೈಸೂರಿನ ಒಬ್ಬರು- ಜ್ಯುವೆಲರಿ ಶಾಪ್ ಅವರು. ಬೆಂಗಳೂರಿನ ಒಬ್ಬರು ಕೂಡ ಇದರಲ್ಲಿ ಪ್ಲ್ಯಾನ್ ಮಾಡಿದ್ದಾರೆ. ಪ್ರಕರಣದಲ್ಲಿ ನಾಲ್ವರು ಹೊರಗಿನವರಾಗಿದ್ದು ಆರೋಪಿಗಳನ್ನ ಕೋರ್ಟ್‌ಗೆ ಒಪ್ಪಿಸಿ ನಂತರ ಮತ್ತಷ್ಟು ಮಾಹಿತಿ ನೀಡುತ್ತೇವೆ ಎಂದಿದ್ದಾರೆ ಪ್ರವೀಣ್ ಸೂದ್.

About Author

Leave a Reply

Your email address will not be published. Required fields are marked *