ಐತಿಹಾಸಿಕ ಹಿನ್ನಲೆ ಇರೋ ಮೈಸೂರು ಇವತ್ತು ಈ ಸ್ಥಿತಿಗೆ ಬಂದಿದೆ: ಇಂದ್ರಜಿತ್ ಲಂಕೇಶ್
1 min readಮೈಸೂರು: ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಅದರಂತೆ ಇವತ್ತು ನಿಮಗೆ ಸಾಕ್ಷಿ ಸಮೇತ ಮಾಹಿತಿ ಸಿಗ್ತಿದೆ ನೋಡಿ.
ಐತಿಹಾಸಿಕ ಹಿನ್ನಲೆ ಇರೋ ಮೈಸೂರು ಇವತ್ತು ಈ ಸ್ಥಿತಿಗೆ ಬಂದಿದೆ. ನಾನು ಕೂಡ ಮೈಸೂರಿನಲ್ಲಿ ಶೂಟಿಂಗ್ ಮಾಡಿದ್ದೇನೆ. ಮೈಸೂರಿನಲ್ಲಿ ಹಲ್ಲೆಗಳಾಗಿದೆ, ದರೋಡೆ, ಗ್ಯಾಂಗ್ ರೇಪ್ ಘಟನೆ ಆಗಿದೆ. ಇದು ಮೈಸೂರನ್ನ ಡಿಸ್ಟರ್ಬ್ ಮಾಡಿದೆ.
ಸಂಪೂರ್ಣ ಈ ಘಟನೆಯಲ್ಲಿ ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ. ರಾಜಕಾರಣಿಗಳ ಹಸ್ತಕ್ಷೇಪವು ಇದೆ. ಇದರಿಂದಲೇ ಈ ರೀತಿಯ ಘಟನೆ ಆಗ್ತಿದೆ. ರಾಜಕಾರಣಿಗಳು ತಾಲೀಬಾನ್‌ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೇ ಕೆಲವರು ಯುವಕ ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಎಲ್ಲರು ನೋಡ್ತಿದ್ದಾರೆ.
ದೆಹಲಿಯಲ್ಲಿ ನಿರ್ಭಯ ಅಂತ ಕರೆಯುತ್ತಿದ್ದರು. ನಾನು ಇಲ್ಲಿ ಮಾನಿನಿ ಅಂತ ಕರೆಯುತ್ತೇನೆ. ಮಾನಿನಿ ಅಂದರೆ ಮಾನ ಎತ್ತಿ ಹಿಡಿಯುವ ಯುವತಿ ಎಂದರ್ಥ. ಹಾಗಾಗಿ ಈ ಪ್ರಕರಣದಲ್ಲಿ ನಾನು ಯುವತಿಗೆ ಮಾನಿನಿ ಅಂತ ಹೇಳುತ್ತೇನೆ. ಅತ್ಯಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಹಾಕಬೇಕಿದೆ. ಇದು ಬಸ್ ನಿಲ್ದಾಣದ ಬೋರ್ಡ್‌ನಲ್ಲಿ ಹಾಕಬೇಕು. ಇದೇ ಸ್ಥಳದಲ್ಲಿ ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕ್ತಾರೆ. ಆದರೆ ಇದಕ್ಕೆ ಯಾವ ಶಿಕ್ಷೆ ಎಂದು ಹಾಕಬೇಕಿದೆ ಎಂದರು.