ಕೊರೋನಾ ಕಂಟ್ರೋಲ್‌ಗೆ ಮೈಸೂರು ಜಿಲ್ಲಾಡಳಿತ ನ್ಯೂ ಪ್ಲ್ಯಾನ್!

1 min read

ಮೈಸೂರು: ಕೋವಿಡ್ ಕಂಟ್ರೋಲ್‌ಗೆ ಮೈಸೂರು ಜಿಲ್ಲಾಡಳಿತ ನ್ಯೂ ಪ್ಲ್ಯಾನ್ ಮಾಡಿಕೊಂಡಿದೆ. ಮೈಸೂರು ಜಿಲ್ಲಾಡಳಿತದ ವತಿಯಿಂದ ಅಭಿನಂದಿಸುವ ಕೆಲಸ‌ಕ್ಕೆ ಮುಂದಾಗಿದೆ.

ಹೌದು. ಶೂನ್ಯ ಕೋವಿಡ್ ಹೊಂದುವ ಗ್ರಾಮಕ್ಕೆ ಪ್ರಶಸ್ತಿ ನೀಡಲಾಗುವುದು ಅಂತ ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಮಾಡಿದ್ರೆ ಅವರಿಗೆ ಪ್ರಶಸ್ತಿ ಕೊಡ್ತೇವೆ. ಈ ಮೂಲಕ ಕರೋನಾ ನಿಯಂತ್ರಣಕ್ಕೆ ಮುಂದಾಗ್ತೇವೆ ಎಂದು ಇಂದು ನಡೆದ ಪ್ರಧಾನಿ ಮೋದಿ‌ ಜೊತೆಗಿನ ಸಭೆ ಬಳಿಕ ರೋಹಿಣಿ ಸಿಂಧೂರಿ ಹೇಳಿದರು.

ಇನ್ನು ಮೈಸೂರಿನಿಂದ ಕೋವಿಡ್ ಮಿತ್ರ ಕಾನ್ಸೆಪ್ಟ್ ಕಳುಹಿಸುತ್ತೇವೆ. ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿದರೆ ಮಾಹಿತಿ‌ ನೀಡುವಂತೆ‌ ಪ್ರಧಾನಿ ಕೇಳಿದ್ದಾರೆ. ಮೈಸೂರಿನಲ್ಲಿ ಇದೀಗಾ ಕೋವಿಡ್ ಮಿತ್ರ ಮಾಡಿದ್ದೇವೆ. ಕೋವಿಡ್ ಚೆನ್ನಾಗಿ ವರ್ಕ್ ಆಗುತ್ತಿದೆ. ಜಿಲ್ಲೆಯ 175 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಆಗಿದೆ.

ಸೋಂಕಿನ ಲಕ್ಷಣ ಇದ್ದವರು‌ ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ ಮೊದಲ 5 ದಿನ ಮುಖ್ಯವಾದದ್ದು. ತಕ್ಷಣ ಅಗತ್ಯ ಮೆಡಿಸಿನ್ ಕೊಡುವ ಕೆಲಸವಾಗುತ್ತಿದೆ. ಇದರಿಂದ ನಗರ ಆಸ್ಪತ್ರೆಗಳನ್ನ ಅವಲಂಭನೆ ಮಾಡುವುದು ಕಡಿಮೆಯಾಗಿದೆ. ಇದೇ ರೀತಿ‌ ನಗರದಲ್ಲು ಕೋವಿಡ್ ಮಿತ್ರ ಸೆಂಟರ್ ತೆರೆಯುತ್ತಿದ್ದೇವೆ ಅಂತ ತಿಳಿಸಿದರು.

ಟೆಲಿ ಮೆಡಿಸಿನ್ ಕಾನ್ಸೆಪ್ಟ್ ಜಿಲ್ಲೆಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ. ಯುಕೆಯಲ್ಲಿರುವ ಮೈಸೂರಿನ ವೈದ್ಯರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ನುರಿತ ವೈದ್ಯರಿಂದ ಜನರಿಗೆ ಟೆಲಿ ಟ್ರೀಟ್ ಮೆಂಟ್ ಕೊಡುವ ಕೆಲಸವಾಗುತ್ತಿದೆ. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಟೆಲಿ ಮೇಡಿಸನ್ ಮೂಲಕ ಜನರ ಆತ್ಮವಿಶ್ವಾಸ ತುಂಬುವ ಕೆಲಸವಾಗುತ್ತಿದೆ ಎಂದು ಮೈಸೂರಿನಲ್ಲಿ ಡಿಸಿ ರೋಹಿಣಿ ಸಿಂಧೂರಿ‌ ಹೇಳಿದ್ದಾರೆ.

About Author

Leave a Reply

Your email address will not be published. Required fields are marked *