ಸಿಎಂ ಪುತ್ರನಿಗೊಂದು ನ್ಯಾಯ? ಸಾಮಾನ್ಯರಿಗೊಂದು ನ್ಯಾಯ? ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡು ದೇಗುಲಕ್ಕೆ ಭೇಟಿ
1 min readಮೈಸೂರು: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಂಜನಗೂಡು ದೇಗುಲಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ವಿಜೇಂದ್ರ ಭೇಟಿ ನೀಡಿದ್ದು, ಸಿಎಂ ಪುತ್ರನಿಗೊಂದು ನ್ಯಾಯ? ಸಾಮಾನ್ಯರಿಗೊಂದು ನ್ಯಾಯ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳಿಗೆ ಭಕ್ತರಿಗೆ ಪ್ರವೇಶ ನಿಷೇಧ ಮಾಡಿದೆ. ಆದರು ವಿಜಯೇಂದ್ರ ಯಡಿಯೂರಪ್ಪ ಅವರು ನಂಜುಂಡೇಶ್ವರನ ದರ್ಶನ ಪಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ ಸಾರ್ವಜನಿಕರಿಂದ ದೇಗುಲದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ನಮಗು ದೇವರ ದರ್ಶನಕ್ಕೆ ಅನುವು ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿಜಯೇಂದ್ರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರಿಗೆ ಫೋಟೋ ತೆಗೆಯದಂತೆ ನಿರ್ಬಂಧಿಸಲಾಗಿತ್ತು.