70 ಆಟೋ ಚಾಲಕರ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

1 min read

ಮೈಸೂರು: ಮೈಸೂರು ಯುವ ಬಳಗ ವತಿಯಿಂದ 23ನೇ ವಾರ್ಡಿನಲ್ಲಿರುವ ಡಿ ಸುಬ್ಬಯ್ಯ ರಸ್ತೆಯಲ್ಲಿ 70 ಆಟೋ ಚಾಲಕರ ಕುಟುಂಬಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಎಂ.ಎನ್ ನವೀನ್ ಕುಮಾರ್ ರವರು ಆಹಾರ ದಿನಸಿ ಕಿಟ್ ವಿತರಿಸಿದರು.

ಇದೇ ಸಂಧರ್ಭದಲ್ಲಿ ಮೂಡಾ ಸದಸ್ಯರಾದ ಎಂ.ಎನ್ ನವೀನ್ ಕುಮಾರ್ ರವರು ಮಾತನಾಡಿ ಸಾರ್ವಜನಿಕರ ದಿನನಿತ್ಯದ ವಸ್ತುಗಳ ಖರೀದಿಗೆ ಮಾರುಕಟ್ಟೆಗೆ ಬರುವಾಗ ಸಾಮಾಜಿಕ ಅಂತರ ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸೂಚಿಸಬೇಕು ಮತ್ತು ಈಗಾಗಲೇ ರಾಜ್ಯ ಸರ್ಕಾರದಿಂದ ಕಳೆದ ಬಾರಿಯಂತೆ ಈಬಾರಿಯೂ ಸಹಕಾರಧನ ನೀಡಲಾಗಿದ್ದು ತಾವೆಲ್ಲರೂ ಕಾನೂನಾತ್ಮಕವಾಗಿ ಪಡೆದುಕೊಳ್ಳುವಂತೆ ಆನ್ಲೈನ್ ಪ್ರಕ್ರಿಯೆಗೆ ನಮ್ಮ ಮೈಸೂರು ಯುವ ಬಳಗದ ವತಿಯಿಂದ ಸಹಾಯವಾಣಿ ತೆರೆಯವಾಗಿದ್ದು ಇದರ ಉಪಯೋಗ ವಾರ್ಡ್ ನ ನಾಗರಿಕರು ಪಡೆದುಕೊಳ್ಳಲು 9945445166 ಸಂಪರ್ಕಿಸಬಹು ಎಂದರು.

ಈ ಸಂದರ್ಭದಲ್ಲಿದೇವರಾಜ ಸಂಚಾರಿ ನಿರೀಕ್ಷಕರಾದ ಮುನಿಯಪ್ಪ, ಜೀವದಾನ ಗಿರೀಶ್ ಮುಖಂಡರಾದ ಕಾಂತಿಲಾಲ್, ವಾಕರ್ ರ್ಸೋಸಿಯೇಶನ್ ಅಧ್ಯಕ್ಷರು ಚಂದ್ರಶೇಖರ್, ಉದ್ಯಮಿ, CM ಶೆಟ್ಟಿ, ಪ್ರಮೋದ್, ಅಜಯ್ ಶಾಸ್ತ್ರಿ, ಮಂಜುನಾಥ್, ನವೀನ್ ಮುಂತಾದವರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *