ಕಲ್ಯಾಣಗಿರಿಯಲಿ ಹೆಚ್ಚಾದ ಕಳ್ಳತನ: ಪರಿಸ್ಥಿತಿ ಅವಲೋಕಿಸಿದ ಡಿಸಿಪಿ ಪ್ರಕಾಶ್ ಗೌಡ

1 min read

ಮೈಸೂರು: ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 35ರ ಕಲ್ಯಾಣಗಿರಿಯಲಿ ಇತ್ತಿಚೆಗೆ ಕಳ್ಳತನ ಹೆಚ್ಚಾಗಿದೆ‌. ಅಲ್ಲದೆ ಸಣ್ಣ ಪುಟ್ಟ ಗಲಾಟೆಗಳು ಹೆಚ್ಚಾಗಿದೆ ಎಂಬ ದೂರಿನ ಅನ್ವಯ ಮೈಸೂರು ನಗರ ಕಾನೂನು ಸುವ್ಯವಸ್ಥೆಯ ಡಿಸಿಪಿ ಪ್ರಕಾಶ್ ಗೌಡ ಅವರು ಪರಿಸ್ಥಿತಿ ಅವಲೋಕಿಸಿದರು.

ಅನಗತ್ಯವಾಗಿ ತಿರುಗಾಟ, ಗಲಾಟೆ ಹೆಚ್ಚಾದ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಉದಯಗಿರಿ ಠಾಣೆಯ ಪೊಲೀಸ್ ಅಧಿಕಾರಿ ರಾಜು ಸೇರಿ ಹಲವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *