ಸೇವಾಸಿಂಧು ಸೆಂಟರ್’ಗಳ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ
1 min readಮೈಸೂರು: ಕಾರ್ಮಿಕರಿಗೆ ಪರಿಹಾರ ೩ ಸಾವಿರ ರೂ.ಹಣ ಬಿಡುಗಡೆ ಆದೇಶ ಹಿನ್ನೆಲೆಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಅನಧಿಕೃತವಾಗಿ 200 ರಿಂದ 300 ವಸೂಲಿಗೆ ಮುಂದಾದ ಕೆಲ ಸೇವಾಸಿಂಧು ಸೆಂಟರ್ ಗಳ ಮೇಲೆ ಕಾರ್ಮಿಕ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸರ್ಕಾರದಿಂದ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಅಧಿಕೃತ ಅರ್ಜಿ ಬಿಡುಗಡೆ ಮಾಡದಿದ್ದರೂ ಜನರಿಂದ ಹಣ ವಸೂಲಿ ಮಾಡುತ್ತಿರುವ ಸೆಂಟರ್ ಗಳ ವಿರುದ್ಧ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆಯುಕ್ತರಿಂದ ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ನಿರ್ಧಾರ ಮಾಡಿದ್ದಾರೆ.