ನಾಳೆ ಬೆಳಗ್ಗೆ 9 ಗಂಟೆ 11 ನಿಮಿಷಕ್ಕೆ ಅರಮನೆಯಲ್ಲಿ ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ!

1 min read

ವಿಶ್ವವಿಖ್ಯಾತ ನಾಡಹಬ್ಬ ದಸರೆಯ ಗಜಪಡೆಯ ಸ್ವಾಗತ ಕಾರ್ಯಕ್ರಮ ನಾಳೆ ನಡೆಯಲಿದ್ದು ಇದಕ್ಕಾಗಿ ಅರಮನೆ ಆವರಣದಲ್ಲಿ ಸಕಲ ಸಿದ್ದತೆ ನಡೆದಿದೆ.

ನಾಳೆ ಬೆಳಗ್ಗೆ 9 ಗಂಟೆ 11 ನಿಮಿಷಕ್ಕೆ ಅರಮನೆ ಆವರಣಕ್ಕೆ ದಸರಾ ಗಜಪಡೆಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಗುತ್ತಿದೆ. ಇದಕ್ಕಾಗಿ ಅರಮನೆ ಆವರಣದಲ್ಲಿ ಸ್ವಚ್ಚತಾ ಕಾರ್ಯ ಮುಗಿದಿದ್ದು, ಇದಕ್ಕಾಗಿ ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಸಕಲ ಸಿದ್ದತೆ ಮುಕ್ತಾಯಗೊಂಡಿದೆ.

ಗಜಪಡೆಗೆ ಸ್ವಾಗತ ಕೋರಲು ಸಿದ್ದತೆ ಪೂರ್ಣ

ಈಗಾಗಲೇ ಈ ದ್ವಾರದಲ್ಲಿ ಗಜಪಡೆಗೆ ಸ್ವಾಗತ ಕೋರುವ ಕಾರಣ ವೇದಿಕೆ ಸಹಿತ ಗೇಟ್ ಮುಂಭಾಗ ಹಾಗೂ ಸುತ್ತಮುತ್ತಲಲ್ಲಿ ತಳಿರು ತೋರಣ ಕಟ್ಟಿ ಸಿದ್ದತೆ ಮಾಡಿಕೊಂಡಿದ್ದು, ಗಜಪಡೆ ಸ್ವಾಗತಕ್ಕೆ ಅರಮನೆಯ ಸಿಬ್ಬಂದಿ ಸಿದ್ದಗೊಳಿಸಿದ್ದಾರೆ.

ಗಣ್ಯರಿಗೆ ಆಸನದ ವ್ಯವಸ್ಥೆ

ಇನ್ನು ನಾಳೆಯಿಂದ ಅರಮನೆಯಲ್ಲಿ ದಸರಾ ಸಂಭ್ರಮ ಶುರುವಾಗಲಿದ್ದು, ಮಾವುತರು ಮತ್ತು ಕಾವಡಿಗಳು ಹಾಗೂ ಆನೆಗಳಿಗೆ ಶೆಡ್ ನಿರ್ಮಾಣವಾಗಿದ್ದು, ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ನಾಳೆ ಸಂಜೆಯಿಂದಲೇ ಆನೆಗಳಿಗೆ ಅರಮನೆಯಲ್ಲಿ ಒಂದು ಸುತ್ತು ತಾಲೀಮು ಶುರುವಾಗಲಿದ್ದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಯಲಿದೆ.

About Author

Leave a Reply

Your email address will not be published. Required fields are marked *