ಈ ಬಾರಿ ದಸರಾ ಗಜಪಡೆಯ ಆರೋಗ್ಯದ ಜವಬ್ದಾರಿ ಡಾ.ರಮೇಶ್‌ಗೆ!
1 min readಮೈಸೂರು : 2021ರ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ದಸರಾ ಗಜಪಡೆ ಆರೋಗ್ಯ ನಿರ್ವಹಣೆಗಾಗಿ ಡಾ.ರಮೇಶ್‌ರನ್ನ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ದಸರಾ ಗಜಪಡೆ ನಿರ್ವಹಣೆ ಹೊತ್ತ ಯುವ ಪಶುವೈದ್ಯ ಡಾ ರಮೇಶ್, ಪ್ರಸ್ತುತ ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೂರು ವರ್ಷಗಳ ಕಾಲ ಬನ್ನೇರುಘಟ್ಟ ಅರಣ್ಯದಲ್ಲಿ ವನ್ಯಜೀವಿ ವೈದ್ಯರಾಗಿ ಸೇವೆ ಸಲ್ಲಿಸುರುವ ಡಾ.ರಮೇಶ್, ದಸರಾ ಅನೆಗಳ ನಿರ್ವಹಣೆಯ ಹೊಣೆಯನ್ನ ನೀಡಲಾಗಿದೆ. ದಸರಾ ಆನೆ ವೈದ್ಯ ಎಂದೆ ಹೆಸರಾಗಿದ್ದ ಡಾ.ನಾಗಾರಾಜು ಸ್ಥಾನಕ್ಕೆ ಡಾ ರಮೇಶ್ ನೇಮಕ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಗರಾಜ್‌ರನ್ನ ಈಗಾಗಲೇ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.