ಜುಲೈ 26ರಿಂದ ಮೈಸೂರಲ್ಲಿ ಕೋವಿಡ್ ವಾಕ್ಸಿನ್ ಮತ್ತಷ್ಟು ಸುಲಭವಾಗಿ ಸಿಗಲಿದೆ!

1 min read

ಕೋವಿಡ್ ಲಸಿಕೆಗೆ ಮುಂಗಡ ನೊಂದಣಿಗೆ ‘ಕೋವಿನ್-ಕಾರ್’ ತಂತ್ರಾಂಶ

ಜುಲೈ 26ರಿಂದ ಮೈಸೂರು ನಗರದಲ್ಲಿ ಪ್ರಾಯೋಗಿಕ( (Pilot)) ಜಾರಿ

ಮೈಸೂರು : ಹೊಸದಾಗಿ ಲಸಿಕೆ ಪಡೆಯಬೇಕಾಗಿರುವವರು ಮತ್ತು 2ನೇ ಡೋಸ್ ಲಸಿಕೆ ಪಡೆಯಬೇಕಾಗಿರುವವರು ಆನ್‌ಲೈನ್‌ನಲ್ಲಿ ನೊಂದಣಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ‘ಕೋವಿನ್-ಕಾರ್’ ಎಂಬ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಜುಲೈ 26ರಿಂದ ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ( (Pilot) ) ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳು ಆದೇಶ

ಈ ತಂತ್ರಾಂಶದ ಮೂಲಕ ಮೈಸೂರು ನಗರದ ನಾಗರಿಕರು ಆನ್‌ಲೈನ್‌ನಲ್ಲೇ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದು. ಕೋವಿನ್ ತಂತ್ರಾಂಶವನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ನೊಂದಾಯಿಸಿಕೊಳ್ಳಬಹುದು. cowin.karnataka.gov.in ಲಿಂಕ್ ಹಾಗೂ ಮೈಸೂರು ಜಿಲ್ಲಾಡಳಿತದ ಅಂತರ್ಜಾಲದ ಮೂಲಕವೂ ಸಹ ಸ್ವಯಂ ಪ್ರೇರಿತವಾಗಿ ನೊಂದಾಯಿಸಿಕೊಳ್ಳಲು ಅವಕಾಶವಿದೆ.

ಲಸಿಕೆಯ ಲಭ್ಯತೆ ಆಧರಿಸಿ ನೊಂದಾಯಿಸಿದ ಫಲಾನುಭವಿಗಳಿಗೆ ಲಸಿಕಾ ದಿನ, ಸರ್ಕಾರಿ ಆರೋಗ್ಯ ಕೇಂದ್ರದ ಹೆಸರು ಮತ್ತು ಸಮಯದ ಬಗ್ಗೆ 24 ಗಂಟೆಗಳ ಮುಂಚೆ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಸಂದೇಶ ಬರಲಿದೆ. ಫಲಾನುಭವಿಗಳು ಆದ್ಯತೆ ಮೇರೆಗೆ ಲಸಿಕೆ ಮತ್ತು ನಿಗದಿತ ದಿನಾಂಕವನ್ನು ಆಯ್ಕೆ ಮಾಡುವ ಸ್ವಾತಂತ್ರ‍್ಯವನ್ನು ಹೊಂದಿರುತ್ತಾರೆ. ತಮ್ಮ ಲಸಿಕೆ ದಿನವನ್ನು 1 ಬಾರಿ ಬದಲಾವಣೆ ಮಾಡಿಕೊಳ್ಳಲು ಸಹ ಅವಕಾಶ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೊದಲ ಡೋಸ್ ಲಸಿಕೆಗೆ ಹಾಗೂ ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಲಸಿಕೆಗೆ ‘ಕೋವಿನ್-ಕಾರ್’ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮೈಸೂರು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *