ಮೈಸೂರಿನಲ್ಲಿ ಕರೋನಾ ಸೋಂಕಿನ ಪ್ರಮಾಣ ಇಳಿಕೆ!
1 min readಮೈಸೂರು: ಮೈಸೂರಿನಲ್ಲಿಂದು 48 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,71,891 ಕ್ಕೇರಿಕೆಯಾಗಿದೆ.
ಇನ್ನು ಇಂದು 216 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 1,68,010 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,590 ಕ್ಕೆ ಇಳಿಕೆಯಾಗಿದೆ.
ಅಲ್ಲದೆ ಮೈಸೂರಿನಲ್ಲಿಂದು 02 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು ಇದುವರೆಗೆ 2,291 ಕೊರೊನಾ ಸೋಂಕಿತರು ಮೃತರಾಗಿದ್ದಾರೆ.