ನಿದ್ರೆ ಮಂಪರಲ್ಲಿ ಸರ್ಕಾರಿ ಶಾಲೆಯ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಕಂಟೇನರ್!
1 min readಮೈಸೂರು – KR ನಗರ : ಕಂಟೈನರ್ ಲಾರಿಯೊಂದು ಸರ್ಕಾರಿ ಶಾಲೆಗೆ ನುಗ್ಗಿದ ಘಟನೆ ಕೆ.ಆರ್. ನಗರ ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಶಾಲೆಯ ಕಾಂಪೌಂಡ್ ಹಾಗೂ ಅಡುಗೆ ಮನೆಗೆ ಹಾನಿಯಾಗಿದ್ದು ಸದ್ಯ ಯಾವುದೇ ಅನಾಹುತ ಸಂಭವಿಸಿಲ್ಲ.
ಚಾಲಕನ ನಿದ್ರೆ ಮಂಪರುನಿಂದ ಈ ಘಟನೆಯಾಗಿದೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.