ನಂಜನಗೂಡಲ್ಲಿ ಮುಡಿ ಸೇವೆ ತಾತ್ಕಾಲಿಕ ಸ್ಥಗಿತ!
1 min readಮೈಸೂರು – ನಂಜನಗೂಡು : ಕಬಿನಿ ಜಲಾಶಯದಿಂದ ಬರೋಬ್ಬರಿ 30 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡುತ್ತಿರುವ ಕಾರಣ ನಂಜನಗೂಡಿನ ಕಪಿಲಾ ನದಿಯ ಸ್ನಾನ ಘಟ್ಟ ಮುಳುಗಡೆಯತ್ತ ಸಾಗಿದೆ. ಈಗಾಗಲೇ ನಾಲ್ಕೈದು ಮೆಟ್ಟಿಲು ಮುಳುಗಡೆ ಕಂಡಿದ್ದು ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಉಂಟಾಗಿದೆ.
ಈ ಕಾರಣ ನಂಜನಗೂಡಿಗೆ ಆಗಮಿಸುವ ಭಕ್ತರು ನದಿಗೆ ಇಳಿಯದಂತೆ ಸೂಚನೆ ನೀಡಿದ್ದು ನದಿ ತೀರದ ಬಳಿ ಮಾಡುತ್ತಿರುವ ಮುಡಿಸೇವೆಯನ್ನ ತಾತ್ಕಾಲಿಕವಾಗಿ ನೀರಿನ ಪ್ರಮಾಣ ಕಡಿಮೆ ಆಗುವವರೆಗು ರದ್ದು ಮಾಡಿರುವುದಾಗಿ ನಂಜನಗೂಡಿನ ಕಾರ್ಯ ನಿರ್ವಾಹಕ ಅಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ಮೂಲಕ ಮುಡಿ ಸೇವೆ ಸದ್ಯಕ್ಕೆ ತಾತ್ಕಾಲಿಕ ಬಂದ್ ಮಾಡಿದ್ದು ಭಕ್ತರ ಸಹಕರಿಸುವಂತೆ ಸೂಚಿಸಲಾಗಿದೆ.