ಮೈಸೂರಿನಲ್ಲಿ ಮುಂಚೂಣಿ ಕಾರ್ಯಕರ್ತರಾದ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ ಲಸಿಕೆ

1 min read

ಮೈಸೂರು: ಮೈಸೂರಿನಲ್ಲಿ ಮುಂಚೂಣಿ ಕಾರ್ಯಕರ್ತರಾದ 18-44 ವರ್ಷದೊಳಗಿನ ನಗರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್-19 ಲಸಿಕೆ ಹಾಕಿಸಲಾಯಿತು.

ಇದಕ್ಕು ಮುನ್ನ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಅದರಲ್ಲಿ ಗುರುತಿಸಲ್ಪಟ್ಟ 1856 ಗುರುತಿನ ಪತ್ರ ಮತ್ತು ವ್ಯಾಪಾರ ಪ್ರಮಾಣ ಪತ್ರ ನೀಡಿರುವ ಬೀದಿಬದಿ ವ್ಯಾಪಾರಿಗಳನ್ನು ಒಳಗೊಂಡಂತೆ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ಇಂದಿನಿಂದ ದಿನಾಂಕ 27/05/2021 ರಿಂದ 02/06/2021 ರವರೆಗೆ ನಗರದ ಪುರಭವನದಲ್ಲಿ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪಾಲಿಕೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್, ಐಎಎಸ್‌ ರವರು ಚಾಲನೆ ನೀಡಿದರು. ಹೆಚ್ಚುವರಿ ಆಯುಕ್ತರು, ಟಿವಿಸಿ ಸದಸ್ಯರು ಹಾಜರಿದ್ದರು.

About Author

Leave a Reply

Your email address will not be published. Required fields are marked *