ಮೈಸೂರಿನ ಕೋವಿಡ್ ಸೆಂಟರ್‌ನಲ್ಲಿ ಸಂಗೀತ ರಸಸಂಜೆ: ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ತಾಲೂಕು ಆಡಳಿತ
1 min readಮೈಸೂರು: ಮೈಸೂರಿನ ಕೋವಿಡ್ ಸೆಂಟರ್‌ನಲ್ಲಿ ಸಂಗೀತ ರಸಸಂಜೆ ಏರ್ಪಡಿಸಿ ಕೊರೊನಾ ಸೋಂಕಿತರಿಗೆ ತಾಲೂಕು ಆಡಳಿತ ಆತ್ಮಸ್ಥೈರ್ಯ ತುಂಬಿದೆ.
ಹುಣಸೂರಿನ ಬಾಚಹಳ್ಳಿ ರಸ್ತೆಯ ಅದರ್ಶ ಶಾಲೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ತಾಲೂಕು ಆಡಳಿತದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರಸ ಸಂಜೆ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಬಸವರಾಜ್, EO ಗಿರೀಶ್ ಹಾಗೂ ಇತರ ಕಲಾವಿದರು ಹಾಡು ಹಾಡಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್, ತಾಲ್ಲೂಕು ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯಕರ್ತರು ಭಾಗಿಯಾಗಿದ್ದರು.