ಮೈಸೂರಿನಲ್ಲಿ ಲಾಕ್‌ಡೌನ್ ನಡುವೆ ಹಬ್ಬ ಆಚರಣೆ: ಕೋವಿಡ್ ನಿಯಮ ಉಲ್ಲಂಘಿಸಿ ನೂರಾರು ಕೋಳಿಗಳ ಬಲಿ!
1 min readಮೈಸೂರು: ಮೈಸೂರಿನಲ್ಲಿ ಲಾಕ್‌ಡೌನ್ ನಡುವೆಯೂ ಗ್ರಾಮದ ದೇವಸ್ಥಾನದಲ್ಲಿ ಹಬ್ಬ ಆಚರಣೆ ಮಾಡಿ ನೂರಾರು ಕೋಳಿಗಳ ಬಲಿ ನೀಡಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಲ್ಕೆರೆ ಗ್ರಾಮದ ಮಾರಮ್ಮ ದೇವಸ್ಥಾನದಲ್ಲಿ ನೂರಾರು ಕೋಳಿಗಳನ್ನು ಬಲಿ ಕೊಟ್ಟು ಗ್ರಾಮಸ್ಥರು ಹಬ್ಬ ಆಚರಣೆ ಮಾಡಿದ್ದಾರೆ.
ಪ್ರತಿ ವರ್ಷ ಗ್ರಾಮದಲ್ಲಿ ಮಾರಿ ಹಬ್ಬ ಆಚರಣೆ ಮಾಡಲಾಗುತ್ತೆ. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಕೋಳಿ ಬಲಿ ನೀಡಲಾಗಿದೆ. ಕೊರೊನಾ ಮುಕ್ತವಾಗಲಿ ಗ್ರಾಮಕ್ಕೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ತಲೆ ಕತ್ತರಿಸಿ ಕೋಳಿ ಹಿಡಿದುಕೊಂಡಿದ್ದ ಗ್ರಾಮಸ್ಥರ ವಿಡಿಯೋ ವೈರಲ್ ಆಗಿದೆ.