ಮೈಸೂರು : ಡಿಸಿ ಕರೆದಿದ್ದ ಸಭೆಯಲ್ಲಿ ಸರಿಯಾಗಿ ಮಾಸ್ಕ್ ಧರಿಸದ ಅಧಿಕಾರಿಗೆ 250ರೂ ದಂಡ!
1 min readಮೈಸೂರು : ಮೈಸೂರು ಜಿಲ್ಲಾಧಿಕಾರಿಗಳು ಕೋವಿಡ್ ನಿಯಂತ್ರಣ ಸಭೆ ತೆಗೆದುಕೊಂಡ ವೇಳೆ ಅಧಿಕಾರಿಯೊಬ್ಬರು ಸರಿಯಾಗಿ ಮಾಸ್ಕ್ ಧರಿಸದೆ ಸಭೆಗೆ ಬಂದ ಕಾರಣ ಮೈಸೂರು ಪಾಲಿಕೆ ಅಧಿಕಾರಿಗಳು ಆ ಅಧಿಕಾರಿಗೆ 250 ರೂ ದಂಡ ವಿಧಿಸಿದ ಅಪರೂಪದ ಘಟನೆ ಮೈಸೂರಿನಲ್ಲಿ ನಡೆದಿದೆ. ಇಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಢಳಿತದ ಅಧಿಕಾರಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಸ್ಕ್ ಕಡ್ಡಾಯವಾಗಿ ಇರುವಿಕೆ, ಸಾಮಾಜಿಕ ಅಂತರದ ಬಗ್ಗೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ ಇದೆ ಸಭೆಗೆ ಕಡಕೊಳ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಯೇ ಸರಿಯಾಗಿ ಮಾಸ್ಕ್ ಧರಿಸದೆ ಸಭೆಗೆ ಹಾಜರಾಗಿದ್ದರು. ಇದನ್ನ ಕಂಡ ಅಧಿಕಾರಿಗಳು ಅವರಿಗೆ ಕ್ಲಾಸ್ ತೆಗೆದುಕೊಂಡು ತಿಳಿ ಹೇಳುವ ಕೆಲಸ ಮಾಡಿದರು. ಜೊತೆಯಲ್ಲಿ ಕೋವಿಡ್ ನಿಯಂತ್ರಣ ಕಾಯ್ದೆ ಅನ್ವಯ 250ರೂ ದಂಡ ವಿಧಿಸಿದರು. ಅಲ್ಲದೆ ಇದು ಎಲ್ಲರಿಗು ಎಚ್ಚರಿಕೆ ಸಂದೇಶ ಎಂದರು