ಮೈಸೂರು‌: ಕೆ.ಆರ್ ಕ್ಷೇತ್ರದಲ್ಲಿ ಸರ್ಕಾರದ ಯೋಜನೆ ತಿಳಿಸಲು ವಾರ್ಡ್ ವಾರ್ ಅಧ್ಯಕ್ಷರ ನೇಮಕ!

1 min read

ಕೃಷ್ಣರಾಜ ಕ್ಷೇತ್ರದಲ್ಲಿಂದ ಬಿಜೆಪಿ ವತಿಯಿಂದ ವಾರ್ಡ್ ವಾರ್ ಬೂತ್ ಅಧ್ಯಕ್ಷರುಗಳ ಕಾರ್ಯಾಗಾರವನ್ನ‌‌ಮೈಸೂರಿನ ವಿದ್ಯಾರಣ್ಯಪುರಂನ ಭಾಜಪಾ ಕಚೇರಿಯಲ್ಲಿ ನಡೆಸಲಾಯಿತು. ಈ ಕಾರ್ಯಾಗಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ‌ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಅವರಿಗೆ ವಿಶೇಷವಾದ ತರಬೇತಿಗಳನ್ನು ನೀಡಲಾಯಿತು. ಜೊತೆಗೆ ಸಾಮಾಜಿಕ ಪಾಲುದಾರಿಕೆ ಸಮಿತಿ ರಚನೆ ಬಗ್ಗೆ ಸೂಚನೆ ನೀಡಲಾಯಿತು.

ಎಲ್ಲಾ ಬೂತ್ ಅಧ್ಯಕ್ಷರುಗಳಿಗೆ ಐ.ಡಿ ಕಾರ್ಡ್ ವಿತರಣೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿಯ ಕೈಪಿಡಿಯನ್ನು ನೀಡಿ ಮಾತನಾಡಿದ ಶಾಸಕ ರಾಮದಾಸ್, ಬೂತ್ ಅಧ್ಯಕ್ಷ ಅವನು ದೇಶದ ನರನಾಡಿ ಇದ್ದ ಹಾಗೆ. ಒಂದು ನರ ವ್ಯತ್ಯಾಸವಾದರೂ ದೇಹಕ್ಕೆ ತೊಂದರೆಯಾಗುತ್ತೋ? ಅದೇ ರೀತಿ ಬೂತ್ ಅಧ್ಯಕ್ಷರು ದೇಶದ ಬೆಳವಣಿಗೆಗೆ ಸಹಕಾರಿಯಾಗುವವರು. ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಜನ ಸಾಮಾನ್ಯರ ಕಷ್ಟ ಕೇಳುವುದು ಬೂತ್ ಅಧ್ಯಕ್ಷರ ಕರ್ತವ್ಯವಾಗಿದೆ. ಇಂದು ಬೂತ್ ಅಧ್ಯಕ್ಷರಿಗೆ ಐ.ಡಿ ಕಾರ್ಡ್ ಅನ್ನು ವಿತರಣೆ ಮಾಡಿದ್ದೇವೆ. ಆ ಕಾರ್ಡ್ ನಿಮಗೆ ಸಮಾಜದಲ್ಲಿ ಒಂದು ಗೌರವವನ್ನು ತಂದುಕೊಡುತ್ತದೆ. ಸಾಮಾಜಿಕ ಪಾಲುದಾರಿಕೆ ಸಮಿತಿಯನ್ನು ಪ್ರತಿ ಬೂತ್ ಮಟ್ಟದಲ್ಲಿ ರಚಿಸಬೇಕಾಗಿದೆ ರಸ್ತೆ ಸುರಕ್ಷಾ ಸಮಿತಿ, ಠಾಣಾ ನೆರೆ ಹೊರೆ ಸಮಿತಿ, ಆಹಾರ ಮತ್ತು ನಾಗರಿಕ ಸರಬರಾಜು ಸಮಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ, ಕುಡಿಯುವ ನೀರಿನ ಗ್ರಾಹಕರ ಸಮಿತಿ, ಉದ್ಯಾನವನಗಳ ಅಭಿವೃದ್ಧಿ ಸಮಿತಿ, ಸ್ಮಶಾನ ಸೇವಾ ಸಮಿತಿ, ಸಾರ್ವಜನಿಕ ಆರೋಗ್ಯ ರಕ್ಷಾ ಸಮಿತಿ ಗಳನ್ನು ರಚಿಸಿ ಸರ್ಕಾರದ ಜೊತೆಗೆ ನಾವೂ ಸಹ ಕೈ ಜೋಡಿಸಬೇಕು ಆಗಲೇ ಬದಲಾವಣೆ ಸಾಧ್ಯ ಆ ದೃಷ್ಟಿಯಿಂದ ಪ್ರತಿ ಬೂತ್ ಮಟ್ಟದಲ್ಲಿಯೂ ವಿಶೇಷ ಸಮಿತಿಗಳನ್ನು ರಚಿಸುವುದು ಅವಶ್ಯಕವಾಗಿದೆ.

ಇನ್ನು ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಲು ಜನಪ್ರತಿನಿಧಿಯಿಂದ ಒಬ್ಬರಿಂದಲೇ ಸಾಧ್ಯವಿಲ್ಲ ಆದ್ದರಿಂದ ಈ ವಿಶೇಷವಾದ ಸಮಿತಿಗಳಲ್ಲಿ ಭಾಗಿಯಾಗಿ ಸರ್ಕಾರದ ಯೋಜನೆಗಳನ್ನು ಮನೆ ಮನೆ ಗೆ ಮುಟ್ಟಿಸುವ ಜವಾಬ್ದಾರಿ ಅವರಿಗೆ ಇರುತ್ತದೆ. ಒಂದೊಂದು ಸಮಿತಿಗಳಲ್ಲಿ ಒಬ್ಬೊಬ್ಬರಿಗೆ ಕೆಲಸ ಮಾಡಲು ಇಚ್ಛೆ ಇರುತ್ತದೆ, ಅಂತಹ ಇಚ್ಛೆ ಇರುವವರನ್ನು ಗುರುತಿಸಿ ಇದಕ್ಕೆ ಜೋಡಿಸಿದರೆ ಮಾತ್ರ ಫಲ ದೊರಕುತ್ತದೆ.‌ ಈ ನಿಟ್ಟಿನಲ್ಲಿ ಬೂತ್ ಅಧ್ಯಕ್ಷರಿಗೆ ಸಮಿತಿಗಳ ರಚನೆಗಳನ್ನು ಮಾಡಬೇಕು ಎಂದರು.

ಸದರಿ ಸಭೆಯಲ್ಲಿ ಸ್ಥಳೀಯ ನಗರಪಾಲಿಕಾ ಸದಸ್ಯರುಗಳು, ಭಾಜಪಾ ಕೆ.ಆರ್ ಕ್ಷೇತ್ರದ ಅಧ್ಯಕ್ಷ ರಾದ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ಪೇಜ್ ಪ್ರಮುಖ್ ಉಸ್ತುವಾರಿ ಪ್ರಸಾದ್ ಬಾಬು , ಪ್ರಮುಖರಾದ ನೂರ್ ಫಾತಿಮಾ, ವಿದ್ಯಾ ಅರಸ್, ವಾರ್ಡ್ ಅಧ್ಯಕ್ಷರುಗಳು, ವಾರ್ಡ್ ಉಸ್ತುವಾರಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *