ಮೈಸೂರು ಮಿಷನ್ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರ ಆಕ್ರೋಶ:
1 min readಮೈಸೂರು: ನಗರದ ಮಿಷನ್ ಆಸ್ಪತ್ರೆ ಮುಂದೆ ಮೃತನ ಸಂಬಂಧಿಕರು ಮೃತದೇಹಕ್ಕಾಗಿ ಆಸ್ಪತ್ರೆ ಮುಂಭಾಗ ಕಲ್ಲು ರಾಶಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಮೈಸೂರಿನ ಗೌಸಿಯಾ ನಗರದ ನಿವಾಸಿ ವಾಜೀದ್ ಪಾಷ ಎಂಬುವವರು ಕೊರೊನಾದಿಂದ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದ ಹಿಂದೆ ಮಿಷನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಸಂಜೆ ಸಾವಿಗೀಡಾಗಿದ್ದರು. ಇದೀಗ ಆಸ್ಪತ್ರೆಯವರು ಮೃತದೇಹ ನೀಡದೆ ಹಣ ಕೇಳಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪ ಮಾಡುತ್ತಿದ್ದಾರೆ.
ಅಲ್ಲದೆ ಮೃತನ ಸಂಬಂಧಿಗಳು ಸಿಟ್ಟಿಗೆದ್ದು ಕಾಲಿನಲ್ಲಿ ಆಸ್ಪತ್ರೆ ಗೇಟ್ಗೆ ಒದ್ದು, ಕಲ್ಲು ತೂರುವುದಾಗಿ ಬೆದರಿಕೆ ಹಾಕಿದ್ದಾರೆ. ಕೊರೊನಾದಿಂದ ಮೃತಪಟ್ಟಿದ್ರಿಂದ ಹಣ ನೀಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಆದರೆ ಮಿಷನ್ ಆಸ್ಪತ್ರೆ ಆಡಳಿತ ಮಂಡಳಿ ಮೃತದೇಹ ಕೊಡಲು ಹಣಕ್ಕಾಗಿ ಪಟ್ಟು ಹಿಡಿದಿದೆ. ಆಡಳಿತ ಮಂಡಳಿ ವಿರುದ್ಧ ಮೃತನ ಸಂಬಂಧಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಬಡವರು ಸರ್, ಇಷ್ಟೊಂದು ದುಡ್ ನಾವೆಲ್ಲಿಂದ ತರೋದು. ಆಸ್ಪತ್ರೆಯವ್ರು ಎಲ್ರನ್ನು ಸಾಯಿಸ್ತಿದ್ದಾರೆ. ಇಲ್ಲಿ ಯಾವ ಚಿಕಿತ್ಸೆನೂ ಕೊಡಲ್ಲ. ಈ ಆಸ್ಪತ್ರೆಯವ್ರು, ಸರ್ಕಾರದವ್ರು ಎಲ್ರೂ ಹಣ ಮಾಡೋಕೆ ಈ ತರಾ ಮಾಡ್ತಿದ್ದಾರೆ. ಕೊರೊನಾ ಪಾಸಿಟಿವ್ ಅಂತಾ ಹೇಳಿದ್ರು, ಈಗ ನಮ್ಮ ಹುಡುಗ ಸತ್ತೊಗಿದ್ದಾನೆ ಎಂದು ಆಸ್ಪತ್ರೆ ಬಳಿ ಮೃತನ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಮೈಸೂರಿನ ಮಂಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.