ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಮನೆ ಮುಂದೆ ನಿಂತಿದ್ದ ಸ್ಕೂಟರ್ ಎಗರಿಸಿದ ಕಳ್ಳರು
1 min readಮೈಸೂರು: ಮೈಸೂರಿನಲ್ಲಿ ಜನತಾ ಕರ್ಪ್ಯೂ ವೇಳೆಯಲ್ಲೂ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಬೆಳ್ಳಂಬೆಳಿಗ್ಗೆ ಮನೆ ಮುಂದೆ ನಿಂತಿದ್ದ ಸ್ಕೂಟರ್ ಅನ್ನ ಕಳ್ಳರು ಎಗರಿಸಿ ಪರಾರಿಯಾಗಿದ್ದಾರೆ.
ಮೈಸೂರಿನ ಕೆಜಿ ಕೊಪ್ಪಲಿನಲ್ಲಿ ಘಟನೆ ನಡೆದಿದ್ದು ಚಾಲಕಿ ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆ.ಜಿ ಕೊಪ್ಪಲಿನ ಅಭಿಷೇಕ್ ಎಂಬುವವರಿಗೆ ಸೇರಿದ್ದ KA 09 HY 6736 ನಂಬರಿನ ಹೊಂಡಾ ಕಂಪನಿಯ ಡಿಯೋ ಸ್ಕೂಟರ್ ಕಳ್ಳತನವಾಗಿದೆ.
ಮತ್ತೊಂದು ಸ್ಕೂಟರ್ ನಲ್ಲಿ ಬಂದ ಮೂವರು ಖದಿಮರು ಕಾಲಿನಿಂದ ಒದ್ದು ಸ್ಕೂಟರ್ ಬೀಗ ಮುರಿದು ಕಳ್ಳತನ ಮಾಡಿದ್ದಾರೆ. ಮೈಸೂರಿನ ಸರಸ್ವತಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ.