ಮೈಸೂರನಲ್ಲಿ ಇಂದು 22 ಮಂದಿ ಕೋವಿಡ್‌ಗೆ ಬಲಿ!
1 min readಮೈಸೂರು: ಮೈಸೂರಿನಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು ಇಂದು ಒಂದೇ ದಿನ 22 ಮಂದಿ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮೈಸೂರು ಜಿಲ್ಲಾಡಳಿತ ಮಾಹಿತಿ ನೀಡಿದ್ದು ಇಂದು 22 ಮಂದಿ ಮೃತರಾಗಿದ್ದು ಕಳೆದ 29 ದಿನದಲ್ಲಿ 224 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಇನ್ನು ಇಂದು ಮೈಸೂರಿನಲ್ಲಿ 2,246 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 94,599 ಕ್ಕೇರಿಕೆಯಾಗಿದೆ. ಅಲ್ಲದೆ ಇಂದು 2,350 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸಮಾಧಾನಕರ ವಿಷಯವೆಂದರೆ ಇಂದು ಪಾಸಿಟಿವ್ ಹೊಂದಿದವರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಇದುವರೆಗೂ 76,668 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 16,637 ಕ್ಕೆ ಇಳಿಕೆ ಆಗಿದ್ದು ಇದುವರೆಗೆ 1,294 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ.