ಪ್ರತಾಪ್ ಸಿಂಹಗೆ ಕಾಂಗ್ರೆಸ್ 10 ಪ್ರಶ್ನೆ’ ನಿಮ್ಮ ಸುಳ್ಳು ಎಕ್ಸ್‌ಫೋಸ್ ಮಾಡುವುದೇ ನನ್ನ ಕೆಲಸ ಎಂದ ಲಕ್ಷ್ಮಣ್!

1 min read

ಮೈಸೂರು : ದಶಪಥದ ಯೋಜನೆ ಬಗ್ಗೆ ಕಾಂಗ್ರೆಸ್ ಬಹಿರಂಗ ಸಂವಾದ. ಸಂಸದ ಪ್ರತಾಪ್ ಸಿಂಹಗೆ ಆಹ್ವಾನ ನೀಡಿ ಸಂವಾದ ಆಯೋಜಿಸಿದ ಕಾಂಗ್ರೆಸ್. ಕಾಂಗ್ರೆಸ್ ಸಂವಾದಕ್ಕೆ ಆಗಮಿಸದ ಸಂಸದ ಪ್ರತಾಪ್ ಸಿಂಹ. ನಿನ್ನೆಯೇ ಪತ್ರ ಬರೆದು ಮಾಜಿ ಸಚಿವ ಮಹದೇವಪ್ಪಗೆ ಟಾಂಗ್ ನೀಡಿದ ಪ್ರತಾಪ್ ಸಿಂಹ. ನಾನು ಇಲ್ಲದಿರುವಾಗ ಸಂವಾದ ಮಾಡಿದ್ದೀರಾ. ನಾನು ಕೇಳಿದ ಎರಡು ಪ್ರಶ್ನೆಗೆ ಉತ್ತರ ಕೊಡಿ ಎಂದು ಪ್ರತಿ ಸವಾಲ್ ಹಾಕಿದ ಸಂಸದ. ಸಂವಾದಕ್ಕೆ ಆಗಮಿಸದ ಸಂಸದ ಪ್ರತಾಪ್‌ ಸಿಂಹ. ಇಂದು ಕೆಪಿಸಿಸಿ ವಕ್ತಾರನಿಂದ ಸಂವಾದದಲ್ಲಿ ಸುದ್ದಿಗೋಷ್ಠಿ.

ಮೈಸೂರಿನಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಸುದ್ದಿಗೋಷ್ಠಿ ಹೈಲೈಟ್ಸ್ ಇಲ್ಲಿದೆ

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ.
ಸಂಸದ ಪ್ರತಾಪ್ ಸಿಂಹಗೆ 10 ಪ್ರಶ್ನೆ ಕೇಳಿದ ಕಾಂಗ್ರೆಸ್.
10 ಪ್ರಶ್ನೆ ಕೇಳುತ್ತೇವೆ ಉತ್ತರ ಕೊಡಿ ಪ್ರತಾಪ್ ಸಿಂಹ.
ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ನಿರ್ಮಾಣ ಎಲ್ಲಿ?
ಕಡಕೊಳದ ಪ್ರಾಜೆಕ್ಟ್ ನಿರ್ಮಾಣ ಏನಾಯ್ತು?
ನಂಜನಗೂಡಲ್ಲಿ 5 ಕೋಟಿ ವೆಚ್ಚದ ಜವಳಿ ಪಾರ್ಕ್ ಎಲ್ಲಿ.?
ಮೈಸೂರು ಕುಶಾಲನಗರ ರೈಲ್ವೆ ಯೋಜನೆ ಎಲ್ಲಿ? ಬರೀ ರೈಲು ಬಿಟ್ಟಿದ್ದೀರಾ!
ಮೈಸೂರು ಸ್ಮಾರ್ಟ್ ಸಿಟಿ ಕೈ ತಪ್ಪಿಸಿದ್ದು ಯಾಕೆ?
ಮೈಸೂರಿಗೆ ನರ್ಮ್ ಯೋಜನೆಯಲ್ಲಿ ಬಂದ ಐದು ಸಾವಿರ ಕೋಟಿ ಬೇಡ ಅಂದ್ರಿ.
ಕೇವಲ 1800 ಕೋಟಿ ಮಾತ್ರ ಬಳಕೆ ಮಾಡಿಕೊಂಡ್ರಿ.
ಉಳಿಕ ಹಣ ಬೇಡ ಎಂದು ವಾಪಾಸ್ ಕಳುಹಿಸಿದ್ರಿ.
ಮೈಸೂರನ್ನ ಪ್ಯಾರಿಸ್ ಮಾಡ್ತಿನಿ ಅಂದ್ರಿ.
ಅದಕ್ಕೆ ಯೋಜನೆ ಸಿದ್ದ ಮಾಡಿಕೊಂಡಿದ್ದೀರಾ?
ನಿಮ್ಮ ಅಪ್ಪಾಜಿ ಮೋದಿ ಅವರು ಬಂದು ಘೋಷಣೆ ಮಾಡಿದ್ರು, ಈ ಯೋಜನೆ ಏನಾಯ್ತು?
ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡ್ತಿನಿ ಅಂದ್ರಿ ಎಲ್ಲಿದೆ.?
ತಂಬಾಕು ಬೆಳೆಗಾರರಿಗೆ ಯೋಜನೆ ರೂಪಿಸುವುದು ಏನಾಯ್ತು.?
ಗ್ರಾಮ ದತ್ತು ತೆಗೆದುಕೊಳ್ಳುವ ಯೋಜನೆ ಏನಾಯ್ತು?
ನಿಮ್ಮ ಕರಿಮುದ್ದನಹಳ್ಳಿ ಗ್ರಾಮದ ದತ್ತು ಸ್ವೀಕಾರ ಏನಾಯ್ತು?
ಈ ಹತ್ತು ಪ್ರಶ್ನೆಗಳಿಗೆ ಉತ್ತರ ಕೊಡಿ ಪ್ರತಾಪ್ ಸಿಂಹ ಅವರೇ.
ನಿಮ್ಮ ಸುಳ್ಳನ್ನ ಎಕ್ಸ್‌ಫೋಸ್ ಮಾಡುವುದೇ ನನ್ನ ಕೆಲಸ.
ನೀವು ನನಗೆ ಬೈದರು ಪರವಾಗಿಲ್ಲ- ನಾನು ನಿಮ್ಮ ಹಿಂದೆ ಬೀಳುತ್ತೇನೆ.
ನಿಮಗೆ ಮಾನ ಮರ್ಯಾದೆ ಇದ್ದರೆ ಬನ್ನಿ ಸಂವಾದಕ್ಕೆ.
ನಿಮಗೆ ಅಧಿಕಾರದ ಮದ ಬಂದು ತಲೆ ತಿರುಗುತ್ತಿದೆ.
ಮೈಸೂರಿನಲ್ಲಿ ಕೆಪಿಸಿಸಿ ವಕ್ತಾರ ಲಕ್ಷ್ಮಣ ಕೆಂಡಾಮಂಡಲ.

About Author

Leave a Reply

Your email address will not be published. Required fields are marked *