ಹಿಂದೂ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿದೆ- ಸಿಎಂ ಬೊಮ್ಮಾಯಿ!

1 min read

ದಾವಣಗೆರೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ರಥ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇದಕ್ಕು ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು,

ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯತೆಯೇ ನಮ್ಮ ನಿಲುವು. ಯಾರಿಗೂ ಬೇಧ-ಭಾವ ಮಾಡುವ ಪ್ರಶ್ನೆಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ದಾವಣಗೆರೆಯ ಜಿಎಂಐಟಿ ಹಲಿಪ್ಯಾಡ್ ನಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಅಂಥ ವಿಚಾರಗಳು ಹಿಂದಿನ ಸರ್ಕಾರಗಳು ಅವರ ಕಾಲದಲ್ಲಿ ಏನೇನು ಮಾಡಿದ್ದಾರೆ ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

ಸಿದ್ದರಾಮೇಶ್ವರ ವಜ್ರ ಮಹೋತ್ಸವಕ್ಕೆ ಗುರುಗಳು ಆಹ್ವಾನ ನೀಡಿದ್ದ ಮೇರೆಗೆ ಇಲ್ಲಿಗೆ ಬಂದಿದ್ದೇನೆ. ನಂತರ ಕೊಪ್ಪಳ್ಳಕ್ಕೆ ಹೋಗಲಿದ್ದೇನೆ ಎಂದರು.

ಹಿಂದೂ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿದೆ
ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆ ಕಡಿಮೆಯಾಗಿದೆ. ನಾವು ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವುದರಿಂದ ಎಲ್ಲರಿಗೂ ಕೂಡ ವಿಶ್ವಾಸ ಬಂದಿದೆ. ಖಂಡಿತವಾಗಿಯೂ ನಮ್ಮ ಪೊಲೀಸರು ಯಾರು ಕೊಲೆಗಡುಕರಿದ್ದಾರೆ ಅವರನ್ನು ಪತ್ತೆ ಹಚ್ಚುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಭದ್ರತೆ ಸಮಸ್ಯೆ ಇಲ್ಲ!
ಗೃಹ ಸಚಿವರ ಮನೆಗೆ ಭದ್ರತೆ ಸಮಸ್ಯೆಯಿಲ್ಲ. ಪ್ರತಿಭಟನಾಕಾರರು ಬಂದ ಸಂದರ್ಭದಲ್ಲಿ ಭದ್ರತೆಯ ಸಮಯದಲ್ಲಿ ಯಾರು ಇರಬೇಕಿತ್ತೋ ಅವರು ಇರಲಿಲ್ಲ. ಅವರಿಗೆ ತಾಕೀತು ಮಾಡಿ ವ್ಯವಸ್ಥೆಯನ್ನು ಸರಿಪಡಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮಂಕಿಪಾಕ್ಸ್ ಚಿಕಿತ್ಸೆ ವ್ಯವಸ್ಥೆ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚೆ

ಮಂಕಿಪಾಕ್ಸ್ ಸಾಂಕ್ರಾಮಿಕವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.ಈ ಕುರಿತು ನಾಳೆ ಸಭೆ ನಡೆಯಲಿದೆ. ವಿಶೇಷವಾಗಿ ಪ್ರಯಾಣಿಕರ ತಪಸಾಣೆ ಮತ್ತು ಬೇರೆ ಬೇರೆ ಕ್ರಮಗಳ ಬಗ್ಗೆ ನಾಳೆ ಮಹತ್ವದ ಸಭೆಯನ್ನು ಆರೋಗ್ಯ ಸಚಿವರ ಜತೆಗೆ ಮಾಡುತ್ತೇವೆ. ಮಂಕಿಪಾಕ್ಸ್ ಬಗ್ಗೆ ಕೆಲವು ನಿರ್ದೇಶನ ಮತ್ತು ಔಷಧಿ ವ್ಯವಸ್ಥೆಗಳ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದರು.

ಚಿತ್ರದುರ್ಗದ ಮುರುಘಾ ಮಠದ ಶ್ರೀಡಾ. ಶಿವಮೂರ್ತಿ ಮುರುಘಾ ಶರಣರು, ಹರಿಹರ ವೀರಶೈವ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳು, ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಶ್ರೀಗಳು, ಮಾದಾರ ಚನ್ನಯ್ಯ ಸ್ವಾಮೀಜಿ, ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಚಿವರಾದ ಬಿ.ಎ. ಬಸವರಾಜ, ಡಾ:ಕೆ.ಸುಧಾಕರ್, ಸಂಸದ ಜಿ ಎಂ ಸಿದ್ದೇಶ್ವರ, ಶಾಸಕ ಅರವಿಂದ ಲಿಂಬಾವಳಿ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *