ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಸ್. ಎ. ರಾಮದಾಸ್
1 min read
ಮೈಸೂರು: ವಾರ್ಡ್ ನಂ.62 ವ್ಯಾಪ್ತಿಯ ವಿಶ್ವೇಶ್ವರ ನಗರ ಭಾಗದಲ್ಲಿ ಸ್ಟರ್ಲಿಂಗ್ ಥಿಯೇಟರ್ ಹಿಂಭಾಗ ಇರುವ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದಲ್ಲಿ ಇಂದು ಶಾಸಕ ಹಾಗೂ ಮಾಜಿ ಸಚಿವರಾದ ಎಸ್. ಎ. ರಾಮದಾಸ್ ಅವರು 25 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

25 ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಾದ ಕಾಂಕ್ರೀಟ್ ರಸ್ತೆ, ಕಟ್ಟಡ ದುರಸ್ಥಿ, ಶೌಚಾಲಯ, ಕಾಂಪೌಂಡ್ ರೈಸಿಂಗ್, ಸ್ಲಾಬ್ ಅಳವಡಿಕೆ ಕಾಮಗಾರಿ ಹಾಗೂ ಚಚ್೯ ಫಾದರ್ ರವರಿಂದ ವಿದ್ಯುತ್ ದೀಪ ಮತ್ತು ಸ್ಮಶಾದ ಮುಂಬಾಗದ ರಸ್ತೆ ಅಭಿವೃದ್ಧಿ, ಸ್ಮಶಾನದ ಕಾವಲುಗಾರರ ಮನೆ ಶಿಥಲ ವ್ಯವಸ್ಥೆಯಲ್ಲಿದ್ದು ಇದನ್ನು ಸರಿಪಡಿಸಿಕೊಡಲು ಮನವಿ ಸಲ್ಲಿಸಿದರು ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳದಲ್ಲಿದ್ದ ಅಭಿವೃದ್ಧಿ ಅಧಿಕಾರಿಗಳಿಗೆ ಫಾದರ್ ರವರ ಮನವಿಗೆ ಸ್ಪಂದಿಸಿ ಇದರ ಅಂದಾಜು ಪಟ್ಟಿಯನ್ನು ತಯಾರು ಮಾಡಿ ಒಂದು ವಾರದೊಳಗೆ ಕಚೇರಿಗೆ ಸಲ್ಲಿಸಲು ತಿಳಿಸಿದರು ಮತ್ತು ಪೋಸ್ಟಲ್ ಕಾಲೋನಿಯ 17, 18, 19ನೇ ಕ್ರಾಸ್ ಗಳಲ್ಲಿ ರಸ್ತೆಗಳು ತುಂಬಾ ಹಾಳಾಗಿದ್ದು ಶಾಸಕರ ಪಾದಯಾತ್ರೆ ಸಂದರ್ಭದಲ್ಲಿ ಮನೆ ಮನೆ ಭೇಟಿ ವೇಳೆ ಇಲ್ಲಿನ ನಿವಾಸಿಗಳು ಒಳಚರಂಡಿ ಮತ್ತು ರಸ್ತೆಗಳ ಡಾಂಬರೀಕರಣಕ್ಕೆ ಮನವಿ ಮಾಡಿದರು ಅದರಂತೆ ಕಳೆದ ತಿಂಗಳು ಒಳಚರಂಡಿ ಕಾಮಗಾರಿ ಮುಗಿದ ಹಿನ್ನಲೆಯಲ್ಲಿ ಇಂದು 27ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಾಂತಮ್ಮವಡಿವೇಲು, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎಂ ವಡಿವೇಲು, ಉಸ್ತುವಾರಿಗಳಾದ ಬಂಗಾರಿಸುರೇಶ್,ನಾಗರತ್ನ,ರವಿ,ಹರಿಯಪ್ಪ,ಡಿಪೋ ಮಹದೇವಣ್ಣ,ಎಂ ಮಹಾದೇವ್, ಚರ್ಚ್ ಫಾದರ್ ರಾದ ಇನ್ಯಾಸಿ ಮುತ್ತುವರು, ಕ್ರಿಶ್ಚಿಯನ್ ಸಮುದಾಯದ ಮುಖಂಡರುಗಳಾದ ವೀಣಾ ವಿಲಿಯಮ್ಸ್,ಲೂದ್೯ ಮೇರಿ, ಲಿಂಕನ್, ರೊನಾಲ್ಡೊ ಸುಹಾಸ್,ಮಣಿರಾಜ್,ಮರಿಯಾ,ಆರೋಕ್ಯರಾಜ್ ಕೀರಿ, ಬೂತ್ ಅಧ್ಯಕ್ಷರುಗಳಾದ ಅರವಿಂದ್, ಶಶಿ, ಮಹೇಶ್ವರಿ, ಖಾಲಿದ್ .ರುದ್ರೇಶ್, ಮುರುಗೇಶ್, ಜ್ಞಾನೇಶ್,ರಾಘವೇಂದ್ರ ಪ್ರಮುಖ ಮುಖಂಡರು,ಹಿರಿಯ ನಾಗರಿಕರು, ಸ್ಥಳೀಯ ನಿವಾಸಿಗಳು ಮತ್ತು ನಗರ ಪಾಲಿಕೆ ಅಧಿಕಾರಗಳು ಉಪಸ್ಥಿತರಿದ್ದರು