ಒಂದು ಲಕ್ಷಕ್ಕೆ ಏರಿದ ‘ಬ್ರಿಂಗ್ ಬ್ಯಾಕ್ ರೋಹಿಣಿ ಸಿಂಧೂರಿ’ ಕ್ಯಾಂಪೇನ್!
1 min readಮೈಸೂರಿನಲ್ಲಿ ‘ಬ್ರಿಂಗ್ ಬ್ಯಾಕ್’ ರೋಹಿಣಿ ಸಿಂಧೂರಿ ಕ್ಯಾಂಪೇನ್ ಜೋರಾಗಿದ್ದು ಈಗಾಗಲೇ ಈ ಕ್ಯಾಂಪೇನ್ಗೆ ಒಂದು ಲಕ್ಷ ಜನರ ಬೆಂಬಲ ಸಿಕ್ಕಿದೆ.
ಆನ್ ಲೈನ್ ನಲ್ಲಿ ನಡೆಯುತ್ತಿರುವ ಈ ಕ್ಯಾಂಪೇನ್ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ದೊಡ್ಡ ಮಟ್ಟದ ಕ್ಯಾಂಪೇನ್ ಇದಾಗಿದೆ. ರೋಹಿಣಿ ಸಿಂಧೂರಿಯನ್ನು ಮತ್ತೆ ಮೈಸೂರಿಗೆ ಡಿಸಿಯಾಗಿ ನೇಮಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಅಭಿಯಾನ ಸದ್ಯ ಒಂದು ಲಕ್ಷಕ್ಕು ಹೆಚ್ಚು ಮಂದಿಯಿಂದ ಸಹಿ ಸಂಗ್ರಹವಾಗಿದೆ. Change.org ಸಂಸ್ಥೆ ಮೂಲಕ ನಡೆಯುತ್ತಿರುವ ಈ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.